ಬೋರ್ಡ್ ಆಫ್ ಇಸ್ಲಾಮಿಕ್ ಎಜ್ಯುಕೇಶನ್ ಪರೀಕ್ಷೆ ಉಳ್ಳಾಲಕ್ಕೆ ಪ್ರಥಮ ರ‍್ಯಾಂಕ್

0
449

ಸನ್ಮಾರ್ಗ ವಾರ್ತೆ

ಬೋರ್ಡ್ ಆಫ್ ಇಸ್ಲಾಮಿಕ್ ಎಜ್ಯುಕೇಶನ್, ಕರ್ನಾಟಕ ಪರೀಕ್ಷೆ ಇದರ 2022- 23ನೇ ಸಾಲಿನ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಡಿಪ್ಲೊಮಾ ಇನ್ ಇಸ್ಲಾಮಿಕ್ ಸ್ಟಡೀಸ್ ತೃತೀಯ ವರ್ಷದ ಕನ್ನಡ ವಿಭಾಗದಲ್ಲಿ ಉಳ್ಳಾಲ ಸೆಂಟರ್‌ನ ಝರೀನಾ ಬೇಗಮ್ ರಾಜ್ಯ ಮಟ್ಟದಲ್ಲಿ ಪ್ರಥಮ ರ‍್ಯಾಂಕ್ ಪಡೆದಿರುತ್ತಾರೆ.

ಅಗಸ್ಟ್ 11 ರಂದು ಯುನಿಟಿ ಹಾಲ್ ಕಲ್ಲಾಪುವಿನಲ್ಲಿ ಜರಗುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಇವರನ್ನು ಸನ್ಮಾನಿಸಲಾಗುವುದು.