ನೊಯಿಡ,ಮಾ.23: ಒಂದು ವರ್ಷದಿಂದ ನಿರುದ್ಯೋಗಿಯಾಗಿ ಕುಳಿತ ಪತಿಯಿಂದ ಬೇಸತ್ತು ಮಹಿಳೆಯೊಬ್ಬರು ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಲಿಸುತ್ತಿರುವ ರೈಲಿನಡಿಗೆ ಬಿದ್ದದ್ದರಿಂದ ಮಹಿಳೆಯ ದೇಹ ಇಬ್ಭಾಗವಾಗಿ ಕತ್ತರಿಸಲ್ಪಟ್ಟಿದೆ. ದಿಲ್ಲಿಯ ಜಸ್ಟ್ ಡಯಲ್ ಕಂಪೆನಿಯ ಸೇಲ್ಸ್ ಮ್ಯಾನೇಜರ್ ಆಗಿದ್ದ ಶೀತಲ್ ಶ್ರೀವಾಸ್ತವ(29) ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದಾರೆ. ಒಂಬತ್ತು ವರ್ಷದ ಹಿಂದೆ ಶೀತಲ್ ಮತ್ತು ದೇವೇಶ್ ಶ್ರೀವಾಸ್ತವ್ರ ಮದುವೆಯಾಗಿದ್ದರು.
ನೊಯಿಡ ಸೆಕ್ಟರ್ ಹದಿನಾರು ಮೆಟ್ರೋ ರೈಲು ನಿಲ್ದಾಣದ ಬಳಿ ಶುಕ್ರವಾರ ಘಟನೆ ನಡೆದಿದೆ. ಮಹಿಳೆಯ ಚಲಿಸುತ್ತಿರುವ ರೈಲಿನ ಮುಂದೆ ಹಾರಿದ್ದರಿಂದ ರೈಲು ನಿಲ್ದಾಣದಲ್ಲಿ ಕೋಲಾಹಲ ನಡೆದಿತ್ತು. ಪೊಲೀಸರು ಮೃತದೇಹವನ್ನು ವಶಪಡಿಸಿಕೊಂಡು ಕುಟುಂಬದವರಿಗೆ ಸೂಚನೆ ನೀಡಿದರು. ಘಟನೆಯ ನಂತರ ಹದಿನೈದು ನಿಮಿಷಕಾಲ ಮೆಟ್ರೊ ರೈಲು ಸಂಚಾರ ಸ್ಥಗಿತಗೊಂಡಿತ್ತು. ಮೃತದೇಹವನ್ನು ಪೊಲೀಸರು ಪೋಸ್ಟ್ಮಾರ್ಟಂಗೆ ಕಳುಹಿಸಿಕೊಟ್ಟಿದ್ದಾರೆ
ಇದೇ ವೇಳೆ ಮಹಿಳೆಯ ಕುಟುಂಬದವರು ಯಾವುದೇ ರೀತಿಯ ದೂರು ನೀಡಿಲ್ಲ. ಮಹಿಳೆಯ ಕುಟುಂಬದವರು ದಿಲ್ಲಿಯ ಗೀತಾ ಕಾಲನಿಯಲ್ಲಿ ವಾಸ್ತವ್ಯದಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.












