ಮಣಿಪುರದಲ್ಲಿ ಇಂದು ನಡೆಯುತ್ತಿರುವುದೆಲ್ಲ ಕಾಂಗ್ರೆಸ್ ಕೊಡುಗೆ -ಎನ್. ಬಿರೇಂದ್ರ ಸಿಂಗ್

0
479

ಸನ್ಮಾರ್ಗ ವಾರ್ತೆ

ನವದೆಹಲಿ: ಇಂದು ಮಣಿಪುರದಲ್ಲಿ ನಡೆಯುತ್ತಿರುವ ಎಲ್ಲ ಸಮಸ್ಯೆಗಳಿಗೆ ಕಾಂಗ್ರೆಸ್ ಕಾರಣ ಎಂದು ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಹೇಳಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರು ಮಾಡುತ್ತಿರುವ ಕೆಲಸ ಶ್ಲಾಘನೀಯ ಎಂದರು. ಅವರ ಮಾತು ಕೇಳಿದ ಕೂಡಲೇ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ನಿರ್ಮಾಣವಾಗಲಿದೆ ಎಂದರು.

“ನಾವು ಮೋದಿ ಮತ್ತು ಶಾ ಅವರ ಸಲಹೆಯನ್ನು ಸ್ವೀಕರಿಸುತ್ತೇವೆ. ಸಂಸತ್ತಿನಲ್ಲಿ ಅವರ ಹೇಳಿಕೆಗಳನ್ನು ಕೇಳಿದ ನಂತರ, ರಾಜ್ಯದಲ್ಲಿ ಶಾಂತಿಯುತ ವಾತಾವರಣವಿದೆ. ಇದು ನಿರಾಶ್ರಿತರಿಗೆ ಪುನರ್ವಸತಿಗಾಗಿ ದೈನಂದಿನ ಪ್ರಕ್ರಿಯೆಯಾಗಿದೆ. ಗೃಹ ಸಚಿವರ ಸೂಚನೆಗಳನ್ನು ಸ್ವೀಕರಿಸಲು ನಾವು ಇಲ್ಲಿದ್ದೇವೆ ಎಂದು ಬಿರೇನ್ ಸಿಂಗ್ ಹೇಳಿದರು.

ಕಳೆದ ದಿವಸ ಮಣಿಪುರದ ಕುರಿತು ರಾಹುಲ್ ಗಾಂಧಿ ನೀಡಿದ ಹೇಳಿಕೆಗೆಯನ್ನು ಬಿರೇನ್ ಸಿಂಗ್ ಟೀಕಿಸಿದರು. ಲಡಾಕಿಗೆ ಹೋಗಿ ರಾಹುಲ್ ಗಾಂಧಿ ಲಡಾಕಿನ ಕುರಿತು ಮಾತಾಡಿದ್ದೆಂದು ಬಿರೇನ್ ಸಿಂಗ್ ಹೇಳಿದರು.

“ರಾಹುಲ್ ಗಾಂಧಿ ಲಡಾಖ್‌ನಿಂದ ಮಣಿಪುರದ ಬಗ್ಗೆ ಹೇಗೆ ಮಾತನಾಡುತ್ತಾರೆ? ನೀವು ಲಡಾಖ್‌ಗೆ ಹೋದಾಗ, ಲಡಾಖ್ ಬಗ್ಗೆ ಮಾತನಾಡಿ. ಮಣಿಪುರದಲ್ಲಿ ಇಂದು ನಡೆಯುತ್ತಿರುವುದು ಕಾಂಗ್ರೆಸ್‌ನ ಕೊಡುಗೆಯಾಗಿದೆ. ಜನರ ಜೀವನದ ಜೊತೆ ರಾಜಕೀಯ ಆಡಬಾರದು” ಎಂದು ಬಿರೇನ್ ಸಿಂಗ್ ಹೇಳಿದ್ದಾರೆ.