ಶ್ರೀನಗರ: ನ್ಯಾಶನಲ್ ಕಾನ್ಫರೆನ್ಸ್‌ನ ಅಕ್ಬರ್ ಲೋನ್ ವಿರುದ್ಧ ಎಫ್‍ಐಆರ್ ದಾಖಲಿಸಲು ಬಿಜೆಪಿ ಆಗ್ರಹ

0
845

ಶ್ರೀನಗರ,ಮಾ. 27: ಬಿಜೆಪಿ ನಾಯಕ ಮುಹಮ್ಮದ್ ಮಕ್ಬೂಲ್ ವಾರ್ ಸೋಮವಾರ ನ್ಯಾಶನಲ್ ಕಾನ್ಫರೆನ್ಸ್ ಹಿರಿಯ ನಾಯಕ ಅಕ್ಬರ್ ಲೋನ್‍ರ ವಿರುದ್ಧ ಎಫ್‍ಐಆರ್ ದಾಖಲಿಸಲು ಆಗ್ರಹಿಸಿದರು. ಅಕ್ಬರ್ ಲೋನ್ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾರೆ ಆದ್ದರಿಂದ ಅವರ ವಿರುದ್ಧ ಎಫ್‍ಐಆರ್ ದಾಖಲಿಸಬೇಕು. ಅಕ್ಬರ್ ಲೋನ್ ಭಾರತದ ವಿರುದ್ಧ ಪ್ರಚೋದಕ ಹೇಳಿಕೆಯನ್ನು ನೀಡಿದ್ದಾರೆ ಎಂದು ಬಿಜೆಪಿಯ ಬಾರಮುಲ್ಲಾ ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತಾಡುತ್ತ ಮುಹಮ್ಮದ್ ಮಕ್ಬೂಲ್ ಹೇಳಿದರು.

ಪಾಕಿಸ್ತಾನ ಪರ ಘೋಷಣೆ ಕೂಗುವುದು ದೇಶಕ್ಕೆ ಅಪಮಾನವಾಗಿದೆ ಎಂದು ಮಕ್ಬೂಲ್ ಅಭಿಪ್ರಾಯ ವ್ಯಕ್ತಪಡಿಸಿದರು. ಈಗಾಗಲೇ ಪಿಡಿಪಿಯಿಂದ ಅಬ್ದುಲ್ ಕಯ್ಯೂಮ್ ವಾನಿ, ಪಿಪಲ್ಸ್ ಕಾನ್ಫರೆನ್ಸ್‍ನಿಂದ ರಝಾ ಎಜಾಝ್ ಅಲಿ, ನ್ಯಾಶನಲ್ ಕಾನ್ಫರೆನ್ಸ್‌ನಿಂದ ಅಕ್ಬರ್ ಲೋನ್ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಆಮಿರ್ ಸುಹೈಲ್ ಬಾರಮುಲ್ಲಾ ಲೋಕಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.