‘ನೆತನ್ಯಾಹು ಪರಮ ಭ್ರಷ್ಟಾಚಾರಿ’: ತನ್ನ ಆರೋಪವನ್ನು ಪುನರುಚ್ಚರಿಸಿದ ಅಮೆರಿಕನ್ ಕಾಂಗ್ರೆಸ್ ಸದಸ್ಯೆ ಇಹ್ಲಾನ್ ಒಮರ್

0
769

ಮಿನೊಸೊಟ: ಅಮೆರಿಕನ್ ಮತ್ತು ಇಸ್ರೇಲ್ ಪಬ್ಲಿಕ್ ಅಫೇರ್ಸ್ ಸಮಿತಿಯಲ್ಲಿ ಬೆಂಜಮಿನ್ ನೆತನ್ಯಾಹು ನೀಡಿದ ಭಾಷಣವನ್ನು ಪ್ರಸ್ತಾಪಿಸಿ ಅಮೆರಿಕದ ಕಾಂಗ್ರೆಸ್ ಸದಸ್ಯೆ ಇಲ್ಹಾನ್ ಒಮರ್ ಗಂಭೀರ ಆರೋಪ ಹೊರಿಸಿದ್ದಾರೆ. ಅವರು ಮಿನೊಸೊಟದಿಂದ ಅಮೆರಿಕನ್ ಕಾಂಗ್ರೆಸ್‍ನಲ್ಲಿ ಸಂಸದೆಯಾಗಿದ್ದಾರೆ. ಕಳೆದ ತಿಂಗಳು ಎಲ್ಹಾನ್ ಒಮರ್ ಅಮೆರಿಕ ಇಸ್ರೇಲ್‍ಗೆ ನೀಡುತ್ತಿರುವ ಬೆಂಬಲದ ಕುರಿತು ಪ್ರಸ್ತಾಪಿಸಿ “ಇದು ಬೆಂಜಮಿನರದ್ದು ಸರಿ. ಆದರೆ ಎಲ್ಲವೂ ಬೆಂಜಮಿನ್‍ರದ್ದಲ್ಲ ಎಂದು ಟ್ವೀಟ್ ಮಾಡಿದ್ದರು. ಈಗ ಮತ್ತೊಮ್ಮೆ ಬೆಂಜಮಿನ್ ನೆತನ್ಯಾಹು ವಿರುದ್ಧ ಗುಡುಗಿದ ಒಮರ್, “ಈ ವ್ಯಕ್ತಿ(ನೆತನ್ಯಾಹು) ಭ್ರಷ್ಟಾಚಾರ ಆರೋಪಿಯಾಗಿದ್ದಾರೆ. ಅವರ ವಿರುದ್ಧ ಮೂರು ಸಾರ್ವಜನಿಕ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣವಿದೆ” ಎಂದು ಇಹ್ಲಾನ್ ಒಮರ್ ಟ್ವೀಟ್ ಮಾಡಿದರು.

ಅಮೆರಿಕನ್ ಮತ್ತು ಇಸ್ರೇಲ್ ಪಬ್ಲಿಕ್ ಅಫೇರ್ಸ್ ಸಮಿತಿಯ ಶಿಫಾರಸು ಮೇರೆಗೆ ಅಮೆರಿಕ ಇಸ್ರೇಲ್‍ಗೆ ಪ್ರತಿವರ್ಷ ನಾಲ್ಕು ಮಿಲಿಯನ್ ಡಾಲರ್ ನೆರವು ನೀಡುತ್ತಿದೆ. ನೆತನ್ಯಾಹು ನಾಲ್ಕು ರಾಜಕೀಯ ಹಗರಣದಲ್ಲಿ ಆರೋಪಿಯಾಗಿದ್ದು, ಅವರು ಮತ್ತು ಅವರ ಪತ್ನಿ ಅಕ್ರಮ ಉಡುಗೊರೆ ಸ್ವೀಕರಿಸಿದ್ದು, ಪೈಡ್ ನ್ಯೂಸ್, ಜಲಂತರ್ಗಾಮಿ ಹಗರಣ ಮತ್ತು ಇಸ್ರೇಲಿನ ದೂರಸಂಪರ್ಕ ಕಂಪೆನಿಯಿಂದ ಗೌಪ್ಯ ಮಾಹಿತಿ ಪಡೆಯಲು ಯತ್ನಿಸಿದ್ದಕ್ಕಾಗಿ ನೆತನ್ಯಾಹು ವಿರುದ್ಧ ಪ್ರಕರಣ ನಡೆಯುತ್ತಿದೆ.