ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಸೆ. 12: ಜಿ 20 ಶೃಂಗ ಸಭೆಗೆ ಭಾರತಕ್ಕೆ ಆಗಮಿಸಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ನಡೆಸಿದ ಸಮಾಲೋಚನೆಯಲಿ ಮಾನವ ಹಕ್ಕುಗಳನ್ನು ಗೌರವಿಸಬೇಕಾದ್ದ ಪ್ರಾಮುಖ್ಯತೆ ಬಗ್ಗೆ ಎಚ್ಚರಿಸಿದ್ದೇನೆ ಎಂದು ಜೋ ಬೈಡನ್ ಹೇಳಿದರು. ಜಿ20 ಶೃಂಗದ ನಂತರ ವಿಯೆಟ್ನಾಂ ರಾಜಧಾನಿ ಹನೋಯ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಭಾರತ ಸಂದರ್ಶನದ ಮತ್ತು ಮೋದಿಯವರ ಜತೆ ಸಮಾಲೋಚನೆಯ ಕುರಿತು ತಿಳಿಸಿದ್ದಾರೆ. ಭಾರತದ ಹೊರಗೆ ಜಿ20 ನಾಯಕರೊಬ್ಬರು ಪತ್ರಿಕಾಗೊಷ್ಠಿ ನಡೆಸಿದ್ದಾರೆ.
ಶಕ್ತಿಶಾಲಿ, ಸಮೃದ್ಧ ದೇಶ ನಿರ್ಮಾಣಕ್ಕೆ ಪ್ರಜೆಗಳ ಸ್ವಾತಂತ್ರ್ಯ, ಮಾಧ್ಯಮಗಳ ನಿಣಾಯಕ ಪಾತ್ರದ ಕುರಿತು ಎಂದಿನಂತೆ ಈ ಸಲವೂ ನಾನು ನರೇಂದ್ರ ಮೋದಿಗೆ ಹೇಳಿದ್ದೇನೆ ಎಂದು ಜೊ ಬೈಡನ್ ಹೇಳಿದರು. ಅಮೆರಿಕ ಅಧ್ಯಕ್ಷರೊಂದಿಗೆ ಪ್ರಧಾನಿ ಮೋದಿ ಸೆಪ್ಟಂಬರ್ ಎಂಟರಂದು ಸಮಾಲೋಚನೆ ನಡೆಸಿದ್ದರು.
ಸಮಾಲೋಚನೆಯ ನಂತರ ಬೈಡನ್ ಜೊತೆ ಬಂದ ಪತ್ರಕರ್ತರಿಗೆ ಪ್ರಶ್ನೆ ಎತ್ತಲು ಅವಕಾಶ ನೀಡಬೇಕೆಂದು ವೈಟ್ ಹೌಸ್ ಹೇಳಿದರು ಅದಕ್ಕೆ ಭಾರತ ಅವಕಾಶ ನೀಡಿರಲಿಲ್ಲ. ಈ ವಿಷಯವನ್ನು ತಿಳಿಸಿದ ವೈಟ್ ಹೌಸ್ ವಕ್ತಾರ, ವಿಯಟ್ನಾಮ್ನಲ್ಲಿ ಅಧ್ಯಕ್ಷರ ಪತ್ರಿಕಾಗೊಷ್ಠಿ ನಡೆಸಬೇಕಾಯಿತು ಎಂದು ತಿಳಿಸಿದರು. ಸಂದರ್ಶನದ ಕುರಿತು ಅಲ್ಲಿ ಪ್ರಶ್ನಿಸುವಂತೆ ಅಮೆರಿಕದ ಪತ್ರಕರ್ತರಿಗೆ ತಿಳಿಸಲಾಗಿತ್ತು ಭಾರತ ಮತ್ತು ಅಮೆರಿಕ ಪರಸ್ಪರ ಭಾಗೀದಾರಿಕೆಯಲ್ಲಿ ಪರಸ್ಪರ ಪಾಲ್ಗೊಳ್ಳಬಹುದು ಮತ್ತು ಬಲಪಡಿಸಬಹುದೆಂದು ತಾನು ಮೋದಿಯೊಂದಿಗೆ ಚರ್ಚಿಸಿದೆ ಎಂದು ಬೈಡನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಕಳೆದ ಜೂನ್ ನಲ್ಲಿ ಮೋದಿ ವೈಟ್ ಹೌಸ್ಗೆ ಬಂದುದರ ಮುಂದುವರಿಕೆ ಈ ಭೇಟಿಯಾಗಿತ್ತು.
ಆರೋಗ್ಯ ಪೂರ್ಣವಾದ ಪ್ರಜಾಪ್ರಭುತ್ವದ ಕುರಿತು ಅಮೆರಿಕ ಅಧ್ಯಕ್ಷ ಮೋದಿಯೊಂದಿಗೆ ಮಾತುಕತೆ ನಡೆಸಿದ್ದಾರೆ. ಎಲ್ಲರೂ ಒಂದೇ ರೀತಿ ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂಬ ನೆಲೆಯಲ್ಲಿ ಮಾತುಕತೆ ನಡೆದಿದೆ ಎಂದು ಅಮೆರಿಕನ್ ರಾಷ್ಟ್ರೀಯ ಸುರಕ್ಷಾ ಕೌನ್ಸಿಲ್ ನ ಭಾರತ-ಫೆಸಿಫಿಕ್ ದೇಶಗಳ ಕೋ ಆರ್ಡಿನೇಟರ್ ಕೇರ್ಟ್ ಕ್ಯಾಂಪ್ಬೆಲ್ ಹೇಳಿದರು.












