ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಸೆ.12: ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಜಿ 20 ಶೃಂಗದಲ್ಲಿ ಟರ್ಕಿ ಅಧ್ಯಕ್ಷ ರಜಬ್ ತಯ್ಯಿಬ್ ಉರ್ದುಗಾನ್ರು ತಮ್ಮ ಭಾಷಣದಲ್ಲಿ ಇಸ್ಲಾಮೋಫೋಬಿಯ ಮತ್ತು ದ್ವೇಷದ ಅಪರಾಧಗಳನ್ನು ಟೀಕಿಸಿದರು.
ಶೃಂಗದ ಪ್ರಸ್ತಾವನೆ ಒಂದು ಭೂಮಿ ಒಂದು ಕುಟುಂಬ, ಒಂದು ಭವಿಷ್ಯ ಎಂಬುದನ್ನು ಎತ್ತಿ ಹಿಡಿದು ಅವರು ಇಸ್ಲಾಮೋಫೋಬಿಯ ಪ್ಲೇಗ್ ರೋಗದಂತೆ ಹರಡುತ್ತಿದೆ ಅದು ಈ ಚಿಂತನೆಗೆ ಅಡಚಣೆ ಒಡ್ಡುತ್ತದೆ ಎಂದು ಉರ್ದುಗಾನ್ ಹೇಳಿದರು. ಉರ್ದುಗಾನ್ರ ಭಾಷಣವನ್ನು ಟಿಆರ್ಟಿ ಚ್ಯಾನೆಲ್ ಪ್ರಸಾರ ಮಾಡಿತ್ತು.
ಒಂದು ಭೂಮಿ ಒಂದು ಕುಟುಂಬ ಒಂದು ಭವಿಷ್ಯ ಉತ್ತಮ ಮಹತ್ತರ ಅಭಿಪ್ರಾಯವಾಗಿದೆ. ದುರದೃಷ್ಟಕ್ಕೆ ಪ್ಲೇಗ್ ರೋಗದಂತೆ ಇಸ್ಲಾಮೋಫೋಬಿಯ ಹರಡುತ್ತಿದೆ. ಈ ಅಭಿಪ್ರಾಯಕ್ಕೆ ಅಪರಿಚಿತ ವಿದ್ವೇಷ ಗಾಸಿಗೊಳಿಸುತ್ತದೆ. ಪಶ್ಚಿಮ ದೇಶಗಳಲ್ಲಿ ಮುಸ್ಲಿಮರು ಮತ್ತು ನಿರಾಶ್ರಿತರನ್ನು ಗುರಿಯಾಗಿಟ್ಟು ನಡೆಯುವ ದಾಳಿಯನ್ನು ನಮ್ಮಿಂದ ಅಂಗೀಕರಿಸಲು ಸಾಧ್ಯವಿಲ್ಲ. ದ್ವೇಷದ ಹರಿವಾಗಿ ಅದು ಮಾರ್ಪಾಟು ಹೊಂದಿದೆ. ಮುಸ್ಲಿಮರು, ನಿರಾಶ್ರಿತರ ಮೇಲೆ ಕ್ರೂರವಾದ ದಾಳಿ ನಡೆಯುವಾಗ ಪ್ರಜಾಪ್ರಭುತ್ವ, ಮಾನವ ಹಕ್ಕುಗಳಿಗಾಗಿ ಮಾತಾಡುವ ಹೆಚ್ಚಿನ ದೇಶಗಳು ಬರೇ ಮೂಕಪ್ರೇಕ್ಷಕವಾಗಿದೆ.
ಪೊಲೀಸರ ಮುಂದೆಯೇ ಪವಿತ್ರ ಕುರ್ ಆನನ್ನು ಅಪಮಾನಿಸುವುದು ಅಭಿಪ್ರಾಯ ಸ್ವಾಂತ್ರ್ಯವಲ್ಲ ನಂಬಿಕೆ ಸ್ವಾಂತ್ರತ್ಯವಲ್ಲ. ಬದಲಾಗಿ ದ್ವೇಷ ಅಪರಾಧವಾಗಿದೆ. ಇಂತಹ ದಾಳಿಗಳನ್ನು ಕಾಣುವಾಗ ನಾವು ಮೌನ ಪಾಲಿಸುತ್ತೇವೆ ಎಂದು ಯಾರೂ ಭಾವಿಸಬೇಡಿ.
ಆದುದ್ದರಿಂದ ದ್ವೇಷ ಅಪರಾಧ ಕೃತ್ಯಗಳೆಸಗುವ ದೇಶಗಳು ದೃಢ ನಿಶ್ಚಯದಿಂದ ಇಸ್ಲಾಮೊಫೋಬಿಯದ ವಿರುದ್ಧ ಕ್ರಮ ಜರಗಿಸಬೇಕು. ಇಸ್ಲಾಮೊಫೋಬಿಯ ತಡೆಯಲು ಪ್ರಸಕ್ತವಿರುವ ಕಾನೂನುಗಳಲ್ಲಿ ತಿದ್ದುಪಡಿ ಅಗತ್ಯವಿರುವ ದೇಶಗಳು ಅದನ್ನೂ ಮಾಡಬೇಕೆಂದು ಉರ್ದುಗಾನ್ ಹೇಳಿದರು.












