‘ರಾಹುಲ್ ಗಾಂಧಿ-ಹಿ ಈಸ್ ಜಸ್ಟ್ ಎ ಕಿಡ್’, ಅದರ ಬಗ್ಗೆ ನಾನೇನೂ ಹೇಳುವುದಿಲ್ಲ ಎಂದ ಮಮತಾ ಬ್ಯಾನರ್ಜಿ!

0
761

ಕೊಲ್ಕತಾ,ಮಾ. 28: ಪಶ್ಚಿಮ ಬಂಗಾಳ ಸರಕಾರವನ್ನು ಟೀಕಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯ ಕುರಿತು ನಾಲ್ಕು ದಿವಸದ ನಂತರ ಪಶ್ಚಿಮಬಂಗಾಳ ಮುಖ್ಯಮಂತ್ರಿ ಪ್ರತಿಕ್ರಿಯೆ ನೀಡಿದ್ದು ರಾಹುಲ್ ಓರ್ವ ಬಾಲಕ. ಆದ್ದರಿಂದ ಅವರ ಕುರಿತು ನಾನೇನು ಹೇಳಲಿ ಎಂದಿದ್ದಾರೆ.

ರಾಹುಲ್‍ರ ಟೀಕೆಯ ಕುರಿತು ಮಮತಾರಲ್ಲಿ ಮಾಧ್ಯಮಗಳು ಪ್ರಶ್ನಿಸಿದಾಗ ಅವರು ಹೀಗೆ ಹೇಳಿದರು. ಕಳೆದ ವಾರ ರಾಹುಲ್ ಗಾಂಧಿ ಕೊಲ್ಕತಾದ ರ್ಯಾಲಿಯಲ್ಲಿ ಮಮತಾ ಸರಕಾರವನ್ನು ಟೀಕಿಸಿದ್ದರು. ಬಿಜೆಪಿ ಸುಳ್ಳು ಹೇಳುತ್ತಿದೆ. ಮಮತಾ ಬ್ಯಾನರ್ಜಿ ಭರವಸೆ ಕೊಡುತ್ತಾರೆ. ಎರಡು ಕಡೆಯೂ ಯಾವುದೂ ನಡೆಯುವುದಿಲ್ಲ. ಜನರಿಗೆ ಇವರಿಂದ ಯಾವ ಪ್ರಯೋಜನವೂ ಆಗುವುದಿಲ್ಲ ಎಂದು ರಾಹುಲ್ ಹೇಳಿದ್ದರು. ಪಶ್ಚಿಮ ಬಂಗಾಳವನ್ನು ಒಬ್ಬರು ಆಳುತ್ತಾರೆ. ಅವರು ಬೇರೆ ಯಾರಲ್ಲಿಯೂ ಮಾತಾಡುವುದಿಲ್ಲ ಎಂದು ರಾಹುಲ್ ಗಾಂಧಿ ಟೀಕಿಸಿದ್ದರು.

ಕಳೆದ ದಿವಸ ಸಮಾಜವಾದಿ ಪಾರ್ಟಿ ನಾಯಕ ಅಖಿಲೇಶ್‍ಯಾದವ್‍ರನ್ನು ಮಮತಾ ಭೇಟಿಯಾಗಿ ಬೆಂಬಲ ಕೋರಿದ್ದರು. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ಸನ್ನು ದೂರ ಇರಿಸಿ ಸಮಾಜವಾದಿ ಪಾರ್ಟಿ ಮತ್ತು ಬಿಎಸ್ಪಿ ಮೈತ್ರಿ ಮಾಡಿಕೊಂಡಿದೆ. ಈಗಾಲೇ ಅಖಿಲೇಶ್ ಯಾದವ್ ಪಶ್ಚಿಮಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಪರ ರ್ಯಾಲಿಗಳಲ್ಲಿ ಭಾಗವಹಿಸುತ್ತೇನೆ ಎಂದು ಘೋಷಿಸಿದ್ದಾರೆ.