ಪುಟ್ಟ ಮಗಳಿಂದಲೇ ಕಳ್ಳತನ ಮಾಡಿಸಿದ ತಂದೆ!- ಪಂಜಾಬ್‍ನ ಅಂಬಾಲದಲ್ಲಿ ಹೀಗೊಂದು ಘಟನೆ

0
1242

ಅಂಬಾಲ,ಮಾ.28: ಅಂಬಾಲದಲ್ಲಿ ವ್ಯಕ್ತಿಯೊಬ್ಬ ತನ್ನ ಚಿಕ್ಕ ಹೆಣ್ಣು ಮಗುವಿನಲ್ಲಿ ಕಳ್ಳತನ ಮಾಡಿಸಿದ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ. ಅಂಬಾಲದ ಸೆಕ್ಟರ್ 9ರಲ್ಲಿ ಒಂದು ಕುಟುಂಬ ನಿನ್ನೆ ಹಲ್ದಿರಾಮ್ ರೆಸ್ಟೊರೆಂಟ್‍ಗೆ ಊಟಕ್ಕೆ ತೆರಳಿತ್ತು. ಈ ಕುಟುಂಬದ ಓರ್ವ ಮಹಿಳೆಯ ಪರ್ಸ್ ಅಲ್ಲಿ ಕಳೆದು ಹೋಯಿತು.
ಪರ್ಸ್ ಹುಡುಕಿದಾಗ ಸಿಸಿಟಿವಿಯಲ್ಲಿ ಸಂಪೂರ್ಣ ಘಟನೆ ಕಳ್ಳತನ ಯಾರು ಮಾಡಿದ್ದೆಂದು ಗೊತ್ತಾಗಿದೆ. ಸಿಸಿಟಿವಿ ದೃಶ್ಯದಲ್ಲಿ ಒಬ್ಬ ಡೀಸೆಂಟ್ ವ್ಯಕ್ತಿ ತನ್ನ ಪುಟ್ಟ ಮಗಳಿಂದ ಪರ್ಸ್ ಕಳ್ಳತನ ಮಾಡಿಸಿದ್ದು ಕಾಣಿಸುತ್ತಿದೆ. ಮಗುವಿಗೆ ಪರ್ಸ್‌ನ್ನು ತೆಗೆದು ಕೊಂಡು ತನ್ನ ಹಿಂದೆ ಬರುವಂತೆ ಸೂಚಿಸುತ್ತಾನೆ. ಮಗು ಮೊದಲು ಪರ್ಸ್ ಎತ್ತಿಕೊಳ್ಳಲಿಲ್ಲ. ನಂತರ ಮಗು ಪರ್ಸನ್ನು ಎತ್ತಿಕೊಂಡು ಅವನ ಹಿಂದೆ ಹೊರಟು ಹೋಗುತ್ತಿರುವುದು ಕಂಡು ಬಂದಿದೆ.

ಆವರೆಗೆ ರೆಸ್ಟೊರೆಂಟ್‍ನಲ್ಲಿ ಉಯ್ಯಾಲೆಯಾಡುತ್ತಿದ್ದ ಬಾಲಕಿ ಮಹಿಳೆಯ ಪರ್ಸನ್ನು ಎತ್ತಿಕೊಂಡು ತಂದೆಯ ಹಿಂದೆಯೇ ಹೋಗುತ್ತಿದ್ದಾಳೆ. ಈ ಘಟನೆಯನ್ನು ಪಂಜಾಬ್ ಕೇಸರಿ ಟಿವಿ ವರದಿ ಮಾಡಿದೆ. ಬಾಲಕಿ ಪರ್ಸ್ ಎತ್ತಿಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ಕಾಣಸುತ್ತಿದೆ. ಘಟನೆಯ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ. ಆದರೆ ಅವರು ಈವರೆಗೆ ಯಾವುದೇ ಕ್ರಮ ಜರಗಿಸಿಲ್ಲ.