ಹೊಸದಿಲ್ಲಿ, ಮಾ. 28: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 293 ಸ್ಥಾನಗಳನ್ನು ಗೆದ್ದು ಸಂಸತ್ತಿನಲ್ಲಿ ಅತೀ ದೊಡ್ಡ ಪಕ್ಷವಾಗಲಿದೆ ಎಂದು ಚಾಣಕ್ಯದ ಚುನಾವಣಾ ತಜ್ಞ ಪಾರ್ಥದಾಸ್ ರ ಸಮೀಕ್ಷೆಯು ಭವಿಷ್ಯ ನುಡಿದಿದೆ. ಸರ್ವೇ ಪ್ರಕಾರ ಎನ್ಡಿಗೆ 250 ಸ್ಥಾನಗಳು ದೊರಕಲಿದೆ. ಅತ್ಯಧಿಕ ಲೋಕ ಸಭಾ ಸೀಟು ಇರುವ ಉತ್ತರಪ್ರದೇಶದಲ್ಲಿ ಬಿಜೆಪಿ ಪತನವಾಗಲಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆ ತಿಳಿಸುತ್ತಿದೆ.
ಆದರೆ ಎನ್ಡಿಎಗೆ 250 ಸೀಟು ಲಭ್ಯವಾಗಲಿದೆ. ಪಂಜಾಬ್ನಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಗಳಿಸಲಿದೆ. ತಮಿಳ್ನಾಡಿನಲ್ಲಿ ಕಾಂಗ್ರೆಸ್ -ಡಿಎಂಕೆ ಸಖ್ಯ ಮುನ್ನಡೆ ಗಳಿಸಬಹುದು.
ಬಿಜೆಪಿಯ ಶಕ್ತಿಕೇಂದ್ರ ಮತ್ತು ಹೆಚ್ಚು ಲೋಕಸಭಾ ಸೀಟುಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿ ದಯನೀಯವಾಗಿ ವಿಫಲವಾಗಲಿದ್ದು ಕೇವಲ 25 ಸೀಟುಗಳು ಮಾತ್ರ ದೊರಕಲಿದೆ.
ಕಾಂಗ್ರೆಸ್ ಕೇವಲ ಆರು ಸ್ಥಾನಗಳನ್ನು ಪಡೆಯಲಿದೆ. ಎಸ್ಪಿ, ಬಿಎಸ್ಪಿ, ಆರ್ ಎಲ್ಡಿ ಸಖ್ಯವು 49 ಸೀಟುಗಳನ್ನು ಪಡೆಯಲಿದೆ. ಬಿಹಾರದಲ್ಲಿ, ಮಧ್ಯ ಪ್ರದೇಶ, ರಾಜಸ್ಥಾನದಲ್ಲಿ ಬಿಜೆಪಿ ಚೇತರಿಸಲಿದೆ. ಬಿಹಾರದ 40 ಸೀಟುಗಳ ಪೈಕಿ ಬಿಜೆಪಿ, ಜೆಡಿಯು, ಎಲ್ಜೆಪಿ 25 ಸೀಟುಗಳಲ್ಲಿ ಗೆಲ್ಲಲಿದೆ. ಕಾಂಗ್ರೆಸ್ ಸಖ್ಯಕ್ಕೆ ಹದಿನೈದು ಸೀಟುಗಳು ಮಾತ್ರ ದೊರಕಲಿದೆ. ರಾಜಸ್ತಾನದಲ್ಲಿ 25 ಸೀಟುಗಳಲ್ಲಿ ಬಿಜೆಪಿ 14 ಸೀಟು ಮತ್ತು ಹನ್ನೊಂದರಲ್ಲಿ ಕಾಂಗ್ರೆಸ್ ಗೆಲುವು ಗಳಿಸಲಿದೆ. ಗೋವಾದಲ್ಲಿ ಸಮಾನ ಫಲಿತಾಂಶ ಇರಲಿದೆ. ಎರಡು ಸೀಟುಗಳಲ್ಲಿ ಬಿಜೆಪಿ, ಕಾಂಗ್ರೆಸ್ ತಲಾ ಒಂದು ಸೀಟು ಗಳಿಸಲಿದೆ.
ಹಿಮಾಚಲ ಪ್ರದೇಶದ ನಾಲ್ಕು ಸೀಟುಗಳಲ್ಲಿ ಮೂರನ್ನು ಬಿಜೆಪಿ ಗೆಲ್ಲಲಿದೆ. ಕಾಂಗ್ರೆಸ್ ಗೆ ಒಂದು ಸೀಟು ಸಿಗಲಿದೆ. ಉತ್ತರಖಂಡದ ಐದು ಸೀಟುಗಳಲ್ಲಿ ಬಿಜೆಪಿಗೆ ನಾಲ್ಕು ಮತ್ತು ಕಾಂಗ್ರೆಸ್ಗೆ ಒಂದು ಸೀಟು ದೊರಕಲಿದೆ.
ತಮಿಳ್ನಾಡಿನಲ್ಲಿ ಬಿಜೆಪಿಗೆ ನಿರಾಶೆಯಾಗಲಿದೆ. ತಮಿಳ್ನಾಡಿನಲ್ಲಿ ಕಾಂಗ್ರೆಸ್ ಡಿಎಂಕೆ ಸಖ್ಯ 40 ಸೀಟುಗಳಲಿ 36ರಲ್ಲಿ ಗೆಲುವು ಸಾಧಿಸಲಿದೆ. ಪಶ್ಚಿಮಬಂಗಾಳದಲ್ಲಿ ಕಾಂಗ್ರೆಸ್ಗೆ ಚೇತರಿಸಲು ಆಗದು. ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ 42 ಸೀಟುಗಳಲ್ಲಿ 36 ಸೀಟುಗಳನ್ನು ಪಡೆದು ವಿಜಯ ಸಾಧಿಸಲಿದೆ. ಬಿಜೆಪಿಗೆ ಆರು ಸೀಟುಗಳು ದೊರಕಲಿದೆ. ಝಾರ್ಖಂಡಿನಲ್ಲಿ 14 ಸೀಟುಗಳಲ್ಲಿ 9 ಸೀಟುಗಳನ್ನು ಕಾಂಗ್ರೆಸ್ ಗೆಲ್ಲಲಿದೆ. ಬಿಜೆಪಿಗೆ ಐದು ಸೀಟು ಸಿಗಲಿದೆ. ಕಾಶ್ಮೀರದಲ್ಲಿ ಕಾಂಗ್ರೆಸ್ ಮತ್ತು ಹರ್ಯಾಣದಲ್ಲಿ ಬಿಜೆಪಿ ಮುನ್ನಡೆ ಸಾಧಿಸಲಿವೆ.
ಜಮ್ಮು ಕಾಶ್ಮೀರದ ಆರು ಸೀಟುಗಳಲ್ಲಿ ನಾಲ್ಕು ಕಾಂಗ್ರೆಸ್ಗೆ ಮತ್ತು 2 ಬಿಜೆಪಿಗೆ ಸಿಗಲಿದೆ. ತೆಲಂಗಾಣದಲ್ಲಿ ಟಿಆರ್ಎಸ್ 17ರಲ್ಲಿ 16 ಸೀಟು ಗೆಲ್ಲಲಿದೆ. ಒಂದು ಸೀಟು ಕಾಂಗ್ರೆಸ್ ಪಾಲಾಗಲಿದೆ. ಆಂಧ್ರ ಪ್ರದೇಶದಲ್ಲಿ ಟಿಡಿಪಿ ಕಾಂಗ್ರೆಸ್ ಸಖ್ಯ 6 ಸೀಟುಗಳನ್ನು ಪಡೆಯಲಿದೆ. ವೈಎಸ್ಆರ್ ಕಾಂಗ್ರೆಸ್ ಪಾರ್ಟಿ ಒಟ್ಟು 25 ಸೀಟುಗಳ ಪೈಕಿ 19 ಸೀಟುಗಳಲ್ಲಿ ಜಯಗಳಿಸಲಿದೆ.












