ಸೌದಿ ಅರೇಬಿಯ: ಮೂವರು ಮಾನವಹಕ್ಕು ಕಾರ್ಯರ್ತರ ತಾತ್ಕಾಲಿಕ ಬಿಡುಗಡೆ

0
634

ಸೌದಿ ಅರೇಬಿಯ,ಮಾ. 29: ಮಹಿಳಾ ಹಕ್ಕು ಕಾರ್ಯಕರ್ತರನ್ನು ಸೌದಿ ಅರೇಬಿಯ ತಾತ್ಕಾಲಿಕವಾಗಿ ಬಿಡುಗಡೆಗೊಳಿಸಿದೆ. ಕಳೆದ ಒಂದು ವರ್ಷದಿಂದ ಅವರು ಜೈಲಿನಲಿದ್ದರು. ವಿಚಾರಣೆಯ ವೇಳೆ ತಮಗೆ ಜೈಲಿನಲ್ಲಿ ಚಿತ್ರಹಿಂಸೆ ಮತ್ತು ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಮಹಿಳಾ ಹಕ್ಕುಕಾರ್ಯಕರ್ತರು ತಿಳಿಸಿದ್ದರು ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಬಿಡುಗಡೆಗೊಂಡ ಕಾರ್ಯಕರ್ತರು ಯಾರೆಂದು ವರದಿ ತಿಳಿಸಿಲ್ಲ.ಆದರೆ ಕೆಲವು ವರದಿಗಳು ಬಿಡುಗಡೆಗೊಂಡವರನ್ನು ಬ್ಲ್ಲಾಗರ್ ಎಮಾನ್ ಅಲ್ ನಫ್ಜನ್, ಅಝೀಝಿಯ ಅಲ್ ಯೂಸುಫ್,ಕಿಂಗ್ ಸೌದ್ ಯುನಿವರ್ಸಿಟಿಯ ನಿವೃತ್ತ ಪ್ರೊಫೆಸರ್ ರೊಕಯ್ಯ ಅಲ್ಲ ಮೊಹ್ರಬ್‍ರನ್ನು ಎಂದು ಹೇಳಿವೆ. ಬುಧವಾರ ಪ್ರಕರಣದಲ್ಲಿ ನಡೆದ ಎರಡನೆ ವಿಚಾರಣೆಯ ವೇಳೆ ಮಹಿಳಾ ಹಕ್ಕು ಕಾರ್ಯಕರ್ತೆಯರನ್ನು ಬಿಡುಗಡೆಗೊಳಿಸಲಾಯಿತು. ಪ್ರಕರಣದ ವಿಚಾರಣೆಯ ವೇಳೆ ವಿದೇಶಿ ವರದಿಗಾರರು ಮತ್ತು ರಾಜತಾಂತ್ರಿಕರ ಕೋರ್ಟಿಗೆ ಪ್ರವೇಶ ನಿರಾಕರಿಸಲಾಗಿತ್ತು. ಶರ್ತಬದ್ಧ ಜಾಮೀನಿನಲ್ಲಿ ಬಿಡುಗಡೆಗೊಂಡ ಮಹಿಳೆಯರು ವಿದೇಶಿ ಮಾಧ್ಯಮಗಳು ಮತ್ತು ಮಾನವಹಕ್ಕು ಗುಂಪುಗಳಿಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ಆರೋಪವನ್ನು ಸೌದಿ ಅರೇಬಿಯ ಹೊರಿಸಿ ಜೈಲಿಗೆ ತಳ್ಳಿತ್ತು. ರಿಯಾದ್‍ನ ಕ್ರಿಮಿನಲ್ ಕೋರ್ಟು ಮೂವರ ತಾತ್ಕಾಲಿಕ ಬಿಡುಗಡೆಗೆ ಆದೇಶಿಸಿದ್ದು ಕೋರ್ಟಿಗೆ ಇವರು ಸಲ್ಲಿಸಿದ ಅರ್ಜಿಯನ್ನು ಅಧ್ಯಯನ ಮಾಡಿ ಮುಂದಿನ ವಿಚಾರಣೆಯ ಸಂದರ್ಭದಲ್ಲಿ ನಿರ್ಧಾರ ತಿಳಿಸಲಾಗುವುದು ಎಂದು ಹೇಳಿದೆ.