ಅಮೆರಿಕ, ಮಾ. 29: ಅಮೆರಿಕದ ವೈದ್ಯರು ಎಚ್ಐವಿ ಪೀಡಿತ ಮಹಿಳೇ ನಿನಾ ಮಾರ್ಟಿನೆಝ್ ಎಂಬವರ ಕಿಡ್ನಿಯನ್ನು ಇನ್ನೋರ್ವ ರೋಗಿಗೆ ಯಶಸ್ವಿಯಾಗಿ ಕಸಿಮಾಡಿದ್ದಾರೆ. ಸೋಮವಾರ ಮೇರಿಲೆಂಡ್ ಬಾಲ್ಟಿಮೋರ್ನ ಜಾನ್ಸ್ ಹಾಪ್ಕಿನ್ಸ್ ಆಸ್ಪತ್ರೆಯಲ್ಲಿ ಕಿಡ್ನಿ ಜೋಡಣೆ ಶಸ್ತ್ರ ಚಿಕಿತ್ಸೆ ನಡೆಯಿತು. ವೈದ್ಯ ಡೊಡರಿ ಸೆಗೆವ್, ಅಸಿಸ್ಟೆಂಟ್ ಪ್ರೊಪೆಸರ್ ವೈದ್ಯೆ ಕರಿಸ್ಟಿಯನ್ ಡುರಾಂಡ್ ಇಬ್ಬರು ರೋಗಿಗಳು ಆರೋಗ್ಯ ಪೂರ್ಣವಾಗಿದ್ದಾರೆಂದು ತಿಳಿಸಿದ್ದಾರೆ. “ಇದು ಮೊದಲ ಸಲ ನಡೆದಿದೆ. ಎಚ್ಐವಿ ರೋಗಿ ಕಿಡ್ನಿ ದಾನಕ್ಕೆ ಒಪ್ಪುವುದು ಜಗತ್ತಿನಲ್ಲೇ ಪ್ರಥಮ ಘಟನೆಯಾಗಿದೆ” ಎಂದು ಸೆಗೆವ್ ಹೇಳಿದ್ದಾರೆ. ಸಾಮಾನ್ಯವಾಗಿ ಎಚ್ಐವಿ ರೋಗಿಗಳು ಕಿಡ್ನಿದಾನ ಮಾಡುವ ಧೈರ್ಯವಹಿಸುವುದಿಲ್ಲ. ಯಾಕೆಂದರೆ ತುಂಬ ಅಪಾಯಕಾರಿ ವಿಷಯವಾಗಿದೆ.ಆದರೆ ಇತ್ತೀಚೆಗಿನ ಮದ್ದುಗಳಿಂದ ಕಿಡ್ನಿಯನ್ನು ಸುರಕ್ಷಿತವಾಗಿರಿಸಲು ಸಾಧ್ಯವಾಗಿದೆ ಎಂದು ವೈದ್ಯರು ಹೇಳಿದರು.
ಶಸ್ತ್ರ ಕ್ರಿಯೆ ಬಹಳ ಸವಾಲಿನದ್ದಾಗಿತ್ತು. ಯಾಕೆಂದರೆ ಸಾರ್ವಜನಿಕರು ಎಚ್ಐವಿ ಕುರಿತು ಬೇರೆಯದೇ ಅಭಿಪ್ರಾಯ ಹೊಂದಿದ್ದಾರೆ. ಈ ರೋಗಿಗಳ ಇಬ್ಬರ ಕೊಡುಗೆ ಶ್ರೇಷ್ಠವಾಗಿದೆ. ನಾವು ಇವರ ಆರೋಗ್ಯದ ಮೇಲೆ ಸುದೀರ್ಘ ನಿಗಾ ಇರಿಸಲಿದ್ದೇವೆ ಎಂದು ವೈದ್ಯ ಡುರಾಂಡ್ ಹೇಳಿದರು. ಎಚ್ಐವಿ ರೋಗಿ ಮೂವತ್ತೈದು ವರ್ಷದ ಮಾರ್ಟಿನೆಝ್ ತಾನು ಆರೋಗ್ಯದಿಂದಿದ್ದೇನೆ ಎಂದು ಹೇಳಿದರು. ಇದೇ ತಿಂಗಳು ಇಂಗ್ಲೆಂಡಿನ್ ಸ್ಟೆಮ್ ಸೆಲ್ ಟ್ರಾನ್ಸ್ಪ್ಲಾಂಟ್ನಿಂದ ಓರ್ವ ಏಡ್ಸ್ ರೋಗಿ ಸಂಪೂರ್ಣ ರೋಗ ಮುಕ್ತನಾಗಿರುವುದು ವರದಿಯಾಗಿದೆ.












