ಇಸ್ರೇಲ್ ಹುಚ್ಚ ದೇಶ; ಗಾಝದ ಮೇಲೆ ದಾಳಿ ಕೂಡಲೇ ನಿಲ್ಲಿಸಿ- ಉರ್ದುಗಾನ್

0
602

ಸನ್ಮಾರ್ಗ ವಾರ್ತೆ

ಇಸ್ತಾಂಬುಲ್, ಅ. 28: ಇಸ್ರೇಲ್ ಹುಚ್ಚ ದೇಶ ಎಂದು ಟರ್ಕಿಯ ಅಧ್ಯಕ್ಷ ರಜಬ್ ತಯ್ಯಿಬ್ ಉರ್ದುಗಾನ್ ಹೇಳಿದ್ದಾರೆ. ಹುಚ್ಚರ ಅವಸ್ಥೆಯಿಂದ ಇಸ್ರೇಲ್ ಆದಷ್ಟು ಬೇಗ ಹೊರ ಬಂದು ಗಾಝದ ಜನರ ಮೇಲೆ ದಾಳಿಯನ್ನು ನಿಲ್ಲಿಸಬೇಕೆಂದು ಅವರು ಹೇಳಿದರು.

ಇಸ್ರೇಲ್ ಗಾಝದ ಬಾಂಬು ದಾಳಿ ಮುಂದುವರಿಸುತ್ತಿದೆ. ಕಳೆದ ರಾತ್ರಿ ಭಾರೀ ಶಕ್ತಿಶಾಲಿಯಾದ ದಾಳಿಯನ್ನು ಅದು ನಡೆಸಿದೆ. ಪುನಃ ಮಕ್ಕಳು ಮಹಿಳೆಯರ ಸಹಿತ ನಿರಪರಾಧಿ ಪ್ರಜೆಗಳನ್ನು ಗುರಿಯಾಗಿಟ್ಟು ದಾಳಿ ಮಾಡುತ್ತಿದೆ. ಇದು ಗಾಝದ ಬಿಕ್ಕಟ್ಟನ್ನು ಹೆಚ್ಚಿಸುತ್ತಿದೆ ಎಂದು ಅವರು ಹೇಳಿದರು.

ಇದೇ ವೇಳೆ ತಮ್ಮ ಸಿಬ್ಬಂದಿಗಳನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ವಿಶ್ವ ಆರೋಗ್ಯ ಸಂಘಟನೆ ತಿಳಿಸಿದೆ. ವಿಶ್ವಾರೋಗ್ಯ ಸಂಘಟನೆ ಮುಖ್ಯಸ್ಥ ಟೆಡ್ರೊಸ್ ಅದನೊಂ ಗಿಬರ್‍ಸಿಸ್ ಇದನ್ನು ತಿಳಿಸಿದ್ದು, ವಿಶ್ವಾರೋಗ್ಯ ಸಂಘಟನೆಯ ಸಿಬ್ಬಂದಿಗಳ ಸುರಕ್ಷೆಯಲ್ಲಿ ಆತಂಕ ಇದೆ ಎಂದು ಅವರು ಹೇಳಿದರು. ಈ ಪರಿಸ್ಥಿತಿಯಲ್ಲಿ ರೋಗಿಗಳನ್ನು ತೆರವುಗೊಳಿಸಲು ಅವರಿಗೆ ಸುರಕ್ಷಿತವಾದ ಸ್ಥಳ ಕಂಡು ಹುಡುಕುವುದು ಪ್ರಾಯೋಗಿಕವಲ್ಲ. ಆಂಬುಲೆನ್ಸ್ ರೋಗಿಗಳ ಹತ್ತಿರ ತಲುಪುವ ಸ್ಥಿತಿ ಕೂಡಾ ಗಾಝದಲ್ಲಿದೆ ಎಂದು ಅವರು ಹೇಳಿದರು.

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟನಿಯೊ ಗುಟರೆಸ್ ಇಸ್ರೇಲ್ ಅತಿಕ್ರಮಣದ ಕುರಿತು ಪ್ರತಿಕ್ರಿಯಿಸಿದ್ದಾರೆ. ಗಾಝಕ್ಕೆ ಸಹಾಯ ತಲುಪಿಸಲು ಕದನ ವಿರಾಮ ಬೇಕೆಂದು ಗುಟರಸ್ ಆಗ್ರಹಿಸಿದ್ದಾರೆ.
ನಿಶ್ಶರ್ತವಾಗಿ ಎಲ್ಲ ಕೈದಿಗಳನ್ನು ಬಿಡುಗಡೆಗೊಳಿಸಬೇಕಾಗಿದೆ. ಜೀವ ರಕ್ಷ ಮದ್ದುಗಳ ವಿತರಣೆ ಮಾಡಲು ಅನುಮತಿಸಬೇಕು. ಸ್ವಂತ ಹೊಣೆಗಾರಿಕೆಗಳನ್ನು ಎಲ್ಲರೂ ನಿರ್ವಹಿಸಬೇಕು. ಇದು ಸತ್ಯದ ಕ್ಷಣಗಳು. ಇತಿಹಾಸ ನಮ್ಮನ್ನು ಮಾಪನ ಮಾಡುತ್ತದೆ ಎಂದು ಗುಟರಸ್ ಹೇಳಿದರು.

ಗಾಝದಲ್ಲಿ ಇಸ್ರೇಲ್ ನರಮೇಧದ ನಡುವೆ ಯುದ್ಧ ಕೂಡಲೇ ನಿಲ್ಲಿಸಬೇಕು ಎಂದು ವಿಶ್ವ ಸಂಸ್ಥೆಯಲ್ಲಿ ಪ್ರಸ್ತಾವ ಪಾಸಾಗಿದೆ. ಇಸ್ರೇಲ್ ಹಮಾಸ್ ಯುದ್ಧ ಕೂಡಲೇ ನಿಲ್ಲಿಸಿ ಮಾನವೀಯ ಹಿತಾಸಕ್ತಿಯನ್ನು ಮುಂದಿಟ್ಟು ಸಂಧಿ ಮಾಡಿಕೊಳ್ಳಬೇಕೆಂದು ಠರಾವಿನಲ್ಲಿ ಆಗ್ರಹಿಸಲಾಗಿದೆ.

193 ಸದಸ್ಯರ ವಿಶ್ವಸಂಸ್ಥೆಯ 22 ಅರಬ್ ದೇಶಗಳು ಪ್ರಸ್ತಾವ ತಂದಿತ್ತು. 120 ದೇಶಗಳು ಬೆಂಬಲಿಸಿ ಮತ ಚಲಾಯಿಸಿದವು. ಹದಿನಾಲ್ಕು ದೇಶಗಳು ವಿರುದ್ಧ ಮತ ಹಾಕಿದರೆ, 45 ದೇಶಗಳು ಮತದಾನದಿಂದ ದೂರ ಉಳಿದಿವೆ. ಇಸ್ರೇಲ್ ಮತ್ತು ಅಮೆರಿಕ  ಪ್ರಸ್ತಾವ ವಿರೋಧಿಸಿ ವೋಟು ಹಾಕಿವೆ. ಭಾರತ ಮತ ಚಲಾಯಿಸದೇ ದೂರ ನಿಂತಿತು.

ಫೆಲಸ್ತೀನ್ ನಾಗರಿಕರಿಗೆ ಆದಷ್ಟು ಬೇಗ ಭದ್ರತೆ ಒದಗಿಸಬೇಕೆಂದು ಪ್ರಸ್ತಾವದಲ್ಲಿ ತಿಳಿಸಲಾಗಿದೆ. ಗಾಝಕ್ಕೆ ಮಾನವೀಯ ಸಹಾಯ ನೀಡಲು ಮಾನವ ಹಕ್ಕು ಕಾರ್ಯಕರ್ತರಿಗೆ ಅಲ್ಲಿಗೆ ತಲುಪಲು ವ್ಯವಸ್ಥೆ ಕಲ್ಪಿಸಿ ಕೊಡಬೇಕೆಂದು ಪ್ರಸ್ತಾವದಲ್ಲಿ ಹೇಳಲಾಗಿದೆ. ಉತ್ತರ ಗಾಝದಿಂದ ದಕ್ಷಿಣ ಗಾಝಕ್ಕೆ ಜನರು ಹೋಗಲು ಇಸ್ರೇಲ್ ನ ಅಂತಿಮ ಶಾಸನ ಹಿಂಪಡೆಯಬೇಕು. ಬಲವಂತಪಡಿಸಿ ಫೆಲಸ್ತೀನಿಯರನ್ನು ಉತ್ತರ ಗಾಝದಿಂದ ತೆರವುಗೊಳಿಸಬಾರದೆಂದು ಪ್ರಸ್ತಾವ ಹೇಳುತ್ತದೆ.