ಸನ್ಮಾರ್ಗ ವಾರ್ತೆ
ಜಮಾಅತೆ ಇಸ್ಲಾಮಿ ಹಿಂದ್ ತೆಲಂಗಾಣ ಘಟಕದ ರಾಜಕೀಯ ಸಮಿತಿಯು ಈಗಾಗಲೇ ಮುಂದಿನ ಅಸೆಂಬ್ಲಿ ಚುನಾವಣೆಗಾಗಿ ಸಿದ್ಧತೆ ನಡೆಸಿತೊಡಗಿದೆ. ಮತದಾರರ ಪಟ್ಟಿಗೆ ಹೆಸರನ್ನು ಸೇರ್ಪಡೆಗೊಳಿಸುವುದು, ಮತ ಚಲಾವಣೆಯಲ್ಲಿ ಏರಿಕೆ ಮಾಡುವುದು ಮತ್ತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲು ಪ್ರಾರಂಭಿಸಿದೆ. 40 ವಿಧಾನಸಭಾ ಕ್ಷೇತ್ರಗಳ ಹೊಣೆಗಾರಿಕೆ ವಹಿಸಿಕೊಂಡಿರುವವರ ಸಭೆಯಲ್ಲಿ ಈ ಕುರಿತು ಅವಲೋಕನ ನಡೆಸಿದೆ.
ರಾಜಕೀಯ ಸಮಿತಿಯು ಚುನಾವಣೆಯ ಹಿನ್ನೆಲೆಯಲ್ಲಿ ಸಾರ್ವಜನಿಕ ಸಭೆ, ಕಾರ್ನರ್ ಮೀಟಿಂಗ್, ಉಲೇಮ ಮತ್ತು ವಿದ್ವಾಂಸರ ಜೊತೆಗೆ ಸಭೆ, ಪ್ರಮುಖ ನಾಗರಿಕರ ಜೊತೆ ರೌಂಡ್ ಟೇಬಲ್ ಮಾತುಕತೆ,, ಮನೆಮನೆ ಭೇಟಿ ಇತ್ಯಾದಿಗಳನ್ನು ನಡೆಸಲಿದೆ.. ಶುಕ್ರವಾರದ ಜುಮಾ ಖುತ್ಬಾಗಳಲ್ಲಿ ಮತದಾನದ ಕುರಿತಂತೆ ಜಾಗೃತಿಯನ್ನು ಮೂಡಿಸಲಾಗುವುದು. ಜೊತೆಗೆ ನೋಟೀಸ್ ಹಂಚುವುದು, ಮಹಿಳೆಯರಲ್ಲಿ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ಕೂಡ ಮಾಡಲಿದೆ.
ಹಾಗೆಯೇ ರಾಜ್ಯ ಘಟಕವು ಐಟಿ ಸೆಲ್ಲನ್ನು ತಯಾರಿಸಿದ್ದು ಈಗಾಗಲೇ ಹತ್ತು ಹಲವು ಮಾಹಿತಿಗಳನ್ನು ಕಲೆ ಹಾಕಿ ವಿಶ್ಲೇಷಣೆ ನಡೆಸುವ ಕೆಲಸವೂ ನಡೆಯುತ್ತಿದೆ.












