ರಷ್ಯದ ಮಿಸೈಲ್ ಖರೀದಿ ಒಪ್ಪಂದ ರದ್ಧತಿಗಾಗಿ ಅಮೆರಿಕ ಮುಂದಿಟ್ಟ ಬೇಡಿಕೆಯನ್ನು ತಿರಸ್ಕರಿಸಿದ ಟರ್ಕಿ

0
717

ಅಂಕಾರ,ಎ.2: ರಷ್ಯದ ಮಿಸೈಲ್‍ಗಳನ್ನು ಖರೀದಿಸದಂದೆ ಅಮೆರಿಕ ಮುಂದಿಟ್ಟ ಪ್ರಸ್ತಾವವನ್ನು ಟರ್ಕಿ ತಿರಸ್ಕರಿಸಿದೆ. ಎಸ್-400 ರಕ್ಷಣಾ ಸಾಮಗ್ರಿಗಳನ್ನು ಖರೀದಿಸುವ ಕುರಿತು ಈಗಾಗಲೇ ಟರ್ಕಿಯು ರಷ್ಯದೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ರಷ್ಯದೊಂದಿಗೆ ವ್ಯವಹಾರ ಈಗಾಗಲೇ ಇದೆ. ಈಗ ಅದನ್ನು ತರಿಸಿಕೊಳ್ಳುವ ಕುರಿತ ವ್ಯವಹಾರಗಳು ಮುಂದುವರಿಯುತ್ತಿವೆ ಎಂದು ಟರ್ಕಿಯ ವಿದೇಶ ಸಚಿವ ಮೆವ್‍ಲಟ್ ಕವುಸೊಗ್ಲು ಹೇಳಿದರು. ಟರ್ಕಿಯ ಅಂಟಾಲ್ಯದಲ್ಲಿ ರಷ್ಯದ ವಿದೇಶ ಸಚಿವರೊಂದಿಗೆ ಜಂಟಿಯಾಗಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿವರವನ್ನು ನೀಡಿದ್ದಾರೆ. ಹಲವು ದೇಶಗಳು ಅಂತಾರಾಷ್ಟ್ರ ನಿಯಮಗಳಿಗೆ ವಿರೋಧ ವ್ಯಕ್ತಪಡಿಸುತ್ತಿವೆ. ಇವೆಲ್ಲವನ್ನು ತಡೆಯಲು ಅಮೆರಿಕ ಪ್ರಯತ್ನಿಸುತ್ತಿದೆ. ಇದೇ ವೇಳೆ ಕಾವುಸೋಗ್ಲು ಅಮೆರಿಕದಿಂದ ಎಫ್-35 ವಿಮಾನವನ್ನು ಪಡೆಯುವ ಪ್ರಕ್ರಿಯೆಯನ್ನು ಕೂಡ ಟರ್ಕಿ ಮುಂದುರಿಸುತ್ತದೆ ಎಂದು ತಿಳಿಸಿದರು.