ಮುಂಬೈ,ಎ.2: ಜೆಎನ್ಯು ನಾಯಕ ಹಾಗೂ ಲೋಕಸಭಾ ಚುನಾವಣೆಯಲ್ಲಿ ಸಿಪಿಐ ಅಭ್ಯರ್ಥಿಯಾಗಿರುವ ಕನ್ಹಯ್ಯಾ ಕುಮಾರ್ ರನ್ನು ಸೋಲಿಸಲು ಮತಯಂತ್ರವನ್ನು ತಿರುಚಬೇಕೆಂದು ಎಂದು ಶಿವಸಸೇನೆ ಸಂಸದ ಸಂಜಯ್ ರಾವುತ್ ಹೇಳಿದ್ದಾರೆ. ಶಿವಸೇನೆಯ ಮುಖವಾಣಿ ಸಾಮ್ನಾದ ಸಂಪಾದಕರು ಆಗಿರುವ ರಾವುತ್ ಮತಯಂತ್ರವನ್ನು ತಿರುಚಿಯಾದರೂ ಬಿಜೆಪಿ ಕನ್ಹಯ್ಯ ಕುಮಾರ್ರನ್ನು ಸೋಲಿಸಬೇಕೆಂದು ಆಗ್ರಹಿಸಿದ್ದಾರೆ.
ಸಾಮ್ನಾದ ತನ್ನ ಅಂಕಣದಲ್ಲಿ ಈತನನ್ನು ಒಮ್ಮೆಯೂ ಪಾರ್ಲಿಮೆಂಟಿಗೆ ಹೋಗಗೊಡಬಾರದು ಎಂದು ಬರೆದಿದ್ದಾರೆ. ಅವರ ಹೇಳಿಕೆಗೆ ಚುನಾವಣಾ ಆಯೋಗ ನೋಟಿಸು ಜಾರಿ ಮಾಡಿದ್ದು ಬುಧವಾರದೊಳಗೆ ಉತ್ತರಿಸುವಂತೆ ಚುನಾವಣಾ ಆಯೋಗ ತಿಳಿಸಿದೆ.
ರಾವುತ್ರ ಉತ್ತರ ಸಿಕ್ಕಿದ ಬಳಿಕ ಚುನಾವಣಾ ಆಯೋಗ ಮುಂದಿನ ಕ್ರಮ ಜರಗಿಸಲಿದ್ದು ನೋಟಿಸು ಸಿಕ್ಕಿದ ವಿವರವನ್ನು ರಾವುತ್ ದೃಢಪಡಿಸಿದ್ದಾರೆ. ಚುನಾವಣಾ ಆಯೋಗವನ್ನು ಗೌರವಿಸುತ್ತೇನೆ ಮತ್ತು ನೋಟಿಸಿಗೆ ಉತ್ತರಿಸುತ್ತೇನೆ ಎಂದು ಅವರು ಹೇಳಿದರು.












