ವಯನಾಡಿನಿಂದ ಸ್ಪರ್ಧಿಸುವ ರಾಹುಲ್ ಗಾಂಧಿ ತೀರ್ಮಾನ ಉತ್ತಮವಾದುದು- ಮಾಜಿ ಜೆಡಿಎಸ್ ನಾಯಕ ಡ್ಯಾನಿಶ್ ಅಲಿ

0
1300

ಲಕ್ನೊ,ಎ.2: ವಯನಾಡಿನಿಂದ ಲೋಕಸಭೆಗೆ ಸ್ಪರ್ಧಿಸುವ ರಾಹುಲ್ ಗಾಂಧಿಯ ತೀರ್ಮಾನ ಉತ್ತಮ ತೀರ್ಮಾನವಾಗಿದೆ ಎಂದು ಮಾಜಿ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಅಲಿ ಹೇಳಿದರು. ಇಂದಿರಾ ಗಾಂಧಿ, ಸೋನಿಯಾ ಗಾಂಧಿ ದಕ್ಷಿಣ ಭಾರತದಿಂದ ಸ್ಪರ್ಧಿಸಿದ್ದರು ಎಂದು ಈ ಸಂದರ್ಭದಲ್ಲಿ ಅವರು ನೆನಪಿಸಿದರು.

ಜೆಡಿಎಸ್ ಆಶೀರ್ವಾದದೊಂದಿಗೆ ಬಿಎಸ್ಪಿ ಟಿಕೆಟ್‍ನಲ್ಲಿ ಡ್ಯಾನಿಶ್ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಅಮ್ರೋಹಿ ಲೋಕಸಭಾ ಕ್ಷೇತ್ರದಲ್ಲಿ ಭಾರೀ ಅಂತರದಿಂದ ಜಯಗಳಿಸುವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯದಲ್ಲಿ 60ಕ್ಕೂ ಹೆಚ್ಚು ಸೀಟುಗಳಲ್ಲಿ ಈಸಲ ಬಿಎಸ್ಪಿ-ಸಮಾಜವಾದಿ ಪಾರ್ಟಿ ಸಖ್ಯ ವಿಜಯಗಳಿಸಲಿದೆ ಎಂದು ಅವರು ಹೇಳಿದರು.

ಜನರಿಗೆ ನೀಡಿದ ಯಾವ ಭರವಸೆಯನ್ನೂ ಕೇಂದ್ರ ಸರಕಾರ ಈಡೇರಿಸಿಲ್ಲ ಎಂದು ಅವರು ಆರೋಪಿಸಿರು. ಜೆಡಿಎಸ್ ತೊರೆದು ಬಿಎಸ್ಪಿ ಟಿಕೆಟ್‍ನಲ್ಲಿ ಉತ್ತರ ಪ್ರದೇಶದ ಅಮ್ರೋಹಿ ಲೋಕಸಭಾ ಕ್ಷೇತ್ರದಿಂದ ಅವರು ಚುನಾವಣೆಗೆ ನಿಂತಿದ್ದಾರೆ.