ಸನ್ಮಾರ್ಗ ವಾರ್ತೆ
ಕೊಲ್ಕತ್ತಾ; ರಾಷ್ಟ್ರಗೀತೆಗೆ ಅಪಮಾನಿಸಿರುವ ಹಿನ್ನಲೆಯಲ್ಲಿ ಬಿಜೆಪಿ ಶಾಸಕರ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.
ರಾಜ್ಯದ ವಿಧಾಸಭೆಯಲ್ಲಿ ಪ್ರತಿಭಟನೆಯ ಸಮಯದಲ್ಲಿ ರಾಷ್ಟ್ರ ಗೀತೆಯನ್ನು ಅಪಮಾನಿಸಲಾಗಿದೆ ಎಂದು 11 ಬಿಜೆಪಿ ಶಾಸಕರ ವಿರುದ್ಧ ಕೇಸು ದಾಖಲಾಗಿದೆ.
ಡಿಸೆಂಬರ್ 4ರಂದು ಐವರು ಬಿಜೆಪಿ ಶಾಸಕರಿಗೆ ಕೊಲ್ಕತ್ತಾ ಪೊಲೀಸ್ ಡಿಟೆಕ್ಟಿವ್ ವಿಭಾಗ ನೋಟಿಸು ಜಾರಿ ಮಾಡಿದೆ.
ನವೆಂಬರ್ 29ಕ್ಕೆ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಕೇಂದ್ರ ಸರಕಾರದ ಉದ್ಯೋಗ ಖಾತರಿ ಕಾರ್ಮಿಕರ ಫಂಡ್ ತಡೆ ಹಿಡಿದಿದ್ದಕ್ಕೆ ಪ್ರತಿಭಟನೆ ನಡೆದಿತ್ತು. ಈ ಸಂದರ್ಭದಲ್ಲಿ ಬಿಜೆಪಿ ಶಾಸಕರು ಗಲಾಟೆ ಮಾಡಿದ್ದರು. ಪ್ರತಿಭಟನೆ ಕೊನೆಗೊಂಡಾಗ ರಾಷ್ಟ್ರಗೀತೆಗೆ ಎದ್ದು ನಿಲ್ಲಲು ಮಮತಾ ಬ್ಯಾನರ್ಜಿ ವಿನಂತಿಸಿದರು. ಬಿಜೆಪಿ ಶಾಸಕರು ಗದ್ದಲವನ್ನು ಮುಂದುವರಿಸಿದ್ದರು.
ಪ.ಬಂಗಾಳದ ಬಿಜೆಪಿ ಶಾಸಕರು ನಿರಂತರ ಎರಡು ದಿವಸಗಳಲಿ ರಾಷ್ಟ್ರ ಗೀತೆಗೆ ಅಗೌರವ ತೋರಿಸಿದರೆಂದು ಟಿಎಂಸಿ ಸಚಿವ ತಪಸ್ ರಾಯ್ ಹೇಳಿದರು. ಇದೇ ವೇಳೆ ವಿಧಾನ ಸಭೆಯಲ್ಲಿ ಪ್ರತಿಪಕ್ಷದ ಧ್ವನಿ ದಮನಿಸಲಾಗುತ್ತಿದೆ ಎಂದು ಸರಕಾರದ ಭ್ರಷ್ಟಾಚಾರದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಉದ್ದೇಶದಿಂದ ಕೇಸು ದಾಖಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.












