ಮುಂಬೈ,ಎ.4: ಶಿವಸೇನಾ ನಾಯಕ ಉದ್ಧವ್ ಠಾಕ್ರೆಯನ್ನು ಟೀಕಿಸಿದ ಬಿಜೆಪಿ ಸಂಸದ ಕೃತಿ ಸೋಮಯ್ಯರಿಗೆ ಈ ಸಲ ಬಿಜೆಪಿ ಟಿಕೆಟ್ ನೀಡಿಲ್ಲ. ಮುಂಬೈ ಈಶಾನ್ಯ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಗೆದ್ದಿದ್ದ ವ್ಯಕ್ತಿ ಸೋಮಯ್ಯ ಆಗಿದ್ದಾರೆ. ಹಾಲಿ ಸೀಟಿನಲ್ಲಿ ಸೋಮಯ್ಯರಿಗೆ ಟಿಕೆಟ್ ನೀಡುವುದೆಂದು ತೀರ್ಮಾನಿಸಲಾಗಿದ್ದರೂ ಶಿವಸೇನೆಯ ಒತ್ತಡಕ್ಕೆ ಮಣಿದು ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಿಂದ ಅವರನ್ನು ಕೈಬಿಟ್ಟಿದೆ. ಸೋಮಯ್ಯರ ಬದಲಿಗೆ ಮನೋಜ್ ಕೋಟ್ಲರಿಗೆ ಮುಂಬೈ ಈಶಾನ್ಯದಿಂದ ಬಿಜೆಪಿಗೆ ಟಿಕೆಟು ನೀಡಿದೆ. ಸೋಮಯ್ಯ ಮುಂಬೈಯ ಬಿಜೆಪಿಯ ಪ್ರಭಾವಿ ನಾಯಕರು ಆಗಿದ್ದು ಹಾಲಿ ಸಂಸದರಲ್ಲಿ ಅವರಿಗೆ ಮಾತ್ರ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದೆ.












