ಗುಜರಾತ್ ದಂಗೆಯ ಆರೋಪಿ ಆನಂದ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ!

0
743

ಅಹ್ಮದಾಬಾದ್,ಎ.4: ಗುಜರಾತಿನ ಆನಂದ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ 2002 ರ ಗುಜರಾತ್ ದಂಗೆಯ ಆರೋಪಿ ಮಿತೇಶ್ ಪಟೇಲ್ ನಾಮಪತ್ರ ಸಲ್ಲಿಸಿದ್ದಾರೆ. ಇಲ್ಲಿಂದ ಮಾಜಿ ಗುಜರಾತ್ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಭರತ್ ಸಿಂಗ್ ಸೋಳಂಕಿ ಕಾಂಗ್ರೆಸ್ ಟಿಕೆಟಿನಲ್ಲಿ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ವೇಳೆ ಆನಂದ್ ಜಿಲ್ಲೆಯ ಪ್ರಮುಖ ಉದ್ಯಮಿ ಮಿತೇಶ್ ಪಟೇಲ್ ತಾನು ಗುಜರಾತ್ ದಂಗೆಯ ಆರೋಪಿ ಎನ್ನುವ ವಿವರವನ್ನು ನೀಡಿದ್ದಾರೆ.

ಬೆಂಕಿ ಹಚ್ಚುವಿಕೆ, ಗಲಭೆ ಸಹಿತ ಆರೋಪಗಳು ಇವರ ವಿರುದ್ಧ ದಾಖಲಾಗಿದ್ದು ದಂಗೆ ಪ್ರಕರಣದಿಂದ ಆನಂದ್ ಸೆಶನ್ಸ್ ಕೋರ್ಟು ಖುಲಾಸೆಗೊಳಿಸಿದೆ ಮತ್ತು ತನ್ನ ಸಹಿತ 50 ಆರೋಪಿಗಳ ವಿರುದ್ಧ ರಾಜ್ಯ ಸರಕಾರ ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದೆ ಎಂದು ಮಿತೇಶ್ ಪಟೇಲ್ ನಾಮ ಪತ್ರ ಸಲ್ಲಿಸುವ ವೇಳೆ ವಿವರ ನೀಡಿದ್ದಾರೆ.