ಕೊಲ್ಕತಾ,ಎ. 5: ರಾಷ್ಟ್ರೀಯ ಪೌರತ್ವ ಪಟ್ಟಿಯ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ಸಡ್ಡು ಹೊಡೆದಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೇಶವನ್ನು ಯಾರು ತೊರೆಯಬೇಕಾಗಿದ್ದೆಂದು ತೀರ್ಮಾನಿಸುವುದು ಮೋದಿಯಲ್ಲ ಎಂದು ಗುಡುಗಿದ್ದಾರೆ. ಪಶ್ಚಿಮಬಂಗಾಳದಲ್ಲಿ ರಾಷ್ಟ್ರೀ ಪೌರತ್ವ ಪಟ್ಟಿಯನ್ನು ಜಾರಿಗೊಳಿಸಲು ಬಿಡುವುದಿಲ್ಲ. ನರೇಂದ್ರ ಮೋದಿ ಸಂವಿಧಾನವನ್ನು ಧಿಕ್ಕರಿಸಿ ಇಂತಹ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಮಮತಾ ಟೀಕಿಸಿದರು.
ಚಾಯ್ ಮಾರಾಟಗಾರ, ಆತ ನೀಡಿದ ಭರವಸೆಗಳನ್ನು ಪಾಲಿಸಲು ವಿಫಲರಾಗಿದ್ದಾರೆ. ಈಗ ಚೌಕಿದಾರನಾಗಿ ಜನರನ್ನು ಮೂರ್ಖರನ್ನಾಗಿ ಮಾಡಲು ಯತ್ನಿಸುತ್ತಿದ್ದಾರೆ ಎಂದು ಮಮತಾ ವ್ಯಂಗ್ಯವಾಡಿದರು. ಪಶ್ಚಿಮ ಬಂಗಾಳದ ಕೂಚ್ ಬಿಹಾರಿನ ಚುನಾವಣಣಾ ರ್ಯಾಲಿಯಲ್ಲಿ ಅವರು ಮಾತಾಡುತ್ತಿದ್ದರು. 2018 ಜುಲೈ 30ರಂದು ಕೇಂದ್ರ ಸರಕಾರ ರಾಷ್ಟ್ರೀಯ ಪೌರತ್ವ ಪಟ್ಟಿಯನ್ನು ಹೊರತಂದಿದೆ. ಇದರ ಪ್ರಕಾರ ಅಸ್ಸಾಮ್ನ ನಾಲ್ಕು ದಶಲಕ್ಷ ಜನರು ಪೌರತ್ವ ಕಳಕೊಂಡಿದ್ದಾರೆ. ಕೇಂದ್ರ ಸರಕಾರ ಜನರು ತಮ್ಮ ಹುಟ್ಟೂರಿನಲ್ಲಿಯೇ ನಿರಾಶ್ರಿತರಾಗುವಂತೆ ಮಾಡಿತೆಂದು ಮಮತಾ ಟೀಕಿಸಿದರು.












