ಚೆನ್ನೈ,ಎ.5: ಏಳು ವರ್ಷದ ಒಂದನೆ ತರಗತಿ ವಿದ್ಯಾರ್ಥಿನಿಯ ಅತ್ಯಾಚಾರವೆಸಗಿ ಕೊಲೆ ಮಾಡಿದ ಪ್ರಕರಣದ ಆರೋಪಿಯಾದ 32 ವರ್ಷದ ಸಂತೋಷ್ ಕುಮಾರ್ ಎಂಬಾತನಿಗೆ ಊರವರು ಸೇರಿ ತೀವ್ರ ಹಲ್ಲೆ ಮಾಡಿದ್ದಾರೆ. ಕೊಯಮತ್ತೂರ್ ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಆರೋಪಯನ್ನು ಕರೆತಂದಾಗ ಓಡಿ ಬಂದ ಜನರ ಗುಂಪು ಸಂತೋಷ್ ಕುಮಾರ್ಗೆ ಯದ್ವಾತದ್ವಾ ಹೊಡೆದಿದ್ದಾರೆ. ಅವನೊಂದಿಗಿದ್ದ ಎರಡ್ಮೂರು ಪೊಲೀಸರಿಗೆ ಜನರ ಗುಂಪಿನಿಂದ ಆರೋಪಿಯನ್ನು ಬಿಡಿಸಿ ಜೀಪಿಗೆ ಹತ್ತಿಸಲು ತುಂಬ ಕಷ್ಟವಾಯಿತು. ಕೋಯಮತ್ತೂರಿನ ತಡಿಯಲ್ಲೂರ್ ಸಮೀಪದ ನಿವಾಸಿ ಒಂದನೆ ತರಗತಿ ವಿದ್ಯಾರ್ಥಿನಿಯನ್ನು ಈತ ಅತ್ಯಾಚಾರಕ್ಕೆ ಗುರಿಪಡಿಸಿ ಕೊಂದು ಹಾಕಿದ್ದನು ಎಂದು ಪ್ರಕರಣ ದಾಖಲಾಗಿದೆ.












