ಹೊಸದಿಲ್ಲಿ,ಎ.5: ಲೋಕಸಭಾ ಚುನಾವಣೆಯಲ್ಲಿ ಸೀಟು ನೀಡದೆ ಬಿಜೆಪಿ ಮೂಲೆಗೆ ತಳ್ಳಿದ ಎಲ್ ಕೆ ಅಡ್ವಾಣಿಗೆ ಉದ್ಯಮಿ ಹಾಗೂ ಪ್ರಿಯಾಂಕಾ ಗಾಂಧಿಯ ಪತಿ ರಾಬರ್ಟ್ ವಾದ್ರಾ ಬೆಂಬಲ ಸೂಚಿಸಿದ್ದಾರೆ. ಪಾರ್ಟಿಯ ಬೆನ್ನೆಲುಬು ಆಗಿದ್ದ ಅಡ್ವಾಣಿಯವರನ್ನು ಬಿಜೆಪಿ ತುಂಬ ಸಮಯದಿಂದ ಕಡೆಗಣಿಸುತ್ತಿದೆ ಎಂದು ವಾದ್ರಾ ಆರೋಪಿಸಿದರು. ನೀತಿನಿಷ್ಠ, ರಾಜತಾಂತ್ರಿಕನಾದ ನಾಯಕನನ್ನು ಗೌರವಿಸಬೇಕು. ಕಡೆಗಣಿಸಿದ್ದು ಸರಿಯಲ್ಲ. ಹಿರಿಯ ನಾಯಕರ ಹಿರಿತನ ಮತ್ತು ಸಲಹೆಗಳಿಗೆ ಯಾವ ಬೆಲೆಯೂ ಅಲ್ಲಿಲ್ಲ ಎನ್ನುವುದು ಅಪಮಾನಕರವಾಗಿದೆ. ಒಳ್ಳೆಯ ಪ್ರತಿಪಕ್ಷ ನಾಯಕ ಎಂಬ ನೆಲೆಯಲ್ಲಿ ಅವರನ್ನು ನಾನು ಸದಾ ಗೌರವಿಸುತ್ತೇನೆ. ಆದರೆ ಅವರ ಪಾರ್ಟಿ ಅವರನ್ನು ಮೂಲೆಗುಂಪು ಮಾಡಿದೆ ಎಂದು ವಾದ್ರಾ ಟ್ವೀಟ್ ಮಾಡಿದ್ದಾರೆ. ಇದೇ ವೇಳೆ ಹಿರಿಯ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್‍ರು ಕೂಡ ಅಡ್ವಾಣಿಯವರನ್ನು ಬೆಂಬಲಿಸಿದ್ದಾರೆ.
The real leaders pic.twitter.com/cuSusznwIe
— Robert Vadra (@irobertvadra) April 5, 2019












