ರಾಹುಲ್‍ ಗಾಂಧಿಯನ್ನು ಭೇಟಿಯಾಗಲು ಶುದ್ಧ ಜೇನು ತುಪ್ಪದೊಂದಿಗೆ ಬಂದ 100 ವರ್ಷದ ಅಜ್ಜ ಪತ್ರೋಸ್-ವೀಡಿಯೊ

0
2020

ವಯನಾಡ್,ಎ.5: ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯನ್ನು ಭೇಟಿಯಾಗಲು ವಿಶೇಷ ಅಭಿಮಾನಿಯೊಬ್ಬರು ಬಂದಿದ್ದರು. ನೂರು ವರ್ಷ ವಯಸ್ಸಿನ ಕಿಯಂಗನಾಲ್ ಪತ್ರೋಸ್‍ಎಂಬ ಹಿರಿಯ ಅಜ್ಜ ರಾಹುಲ್, ಪ್ರಿಯಾಂಕರಿಗೆ ಕೊಡು ತಮ್ಮ ಜೊತೆ ಶುದ್ಧ ಜೇನು ತುಪ್ಪವನ್ನು ತಂದಿದ್ದರು.
ರಾಹುಲ್-ಪ್ರಿಯಾಂಕಾ ಜತೆಯಾಗಿ ಬಂದಿದ್ದಾರೆ ಎಂದರಿತ ಪತ್ರೋಸ್ ಶುದ್ಧ ಕಾಡು ಜೇನು ತುಪ್ಪದ ಬಾಟ್ಲಿಯನ್ನು ತಂದಿದ್ದರು. ಆದರೆ ಜನರ ಗುಂಪನ್ನು ದಾಟಿ ಅವರಿಂದ ರಾಹುಲ್ ಗಾಂಧಿಯನ್ನಾಗಲಿ, ಪ್ರಿಯಾಂಕಾರನ್ನಾಗಲಿ ಭೇಟಿಯಾಗಲು ಸಾಧ್ಯವಾಗಿಲ್ಲ. ಕೊಲೆಂಚೇರಿಯ ಪತ್ರೋಸ್ 89 ವರ್ಷಗಳ ಹಿಂದೆ ವಯನಾಡಿನ ಪುಲ್‍ಪ್ಪಳ್ಳಿಗೆ ವಲಸೆ ಬಂದು ವಾಸಿಸಿದರು. ಇಂದಿರಾಗಾಂಧಿ ಕಾಲದಲ್ಲಿ ಅವರು ಸಕ್ರಿಯ ರಾಜಕೀಯಕ್ಕಿಳಿದಿದ್ದರು. ಈಗಲೂ ಅಂದಿನ ಘೋಷಣೆಗಳು ಅವರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದುಕೊಂಡಿದೆ. ಇಂದಿರಾ, ರಾಜೀವ್ ಗಾಂಧಿ ಸಹಿತ ಇತರ ರಾಜಕಾರಣಿಗಳು ಫ್ರೇಂ ಮಾಡಿದ ಫೋಟೊಗಳನ್ನು ತಮ್ಮೊಂದಿಗೆ ಪತ್ರೋಸ್ ತಂದಿದ್ದರು.