ಹೊಸದಿಲ್ಲಿ,ಎ.5: ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿ ಪರಸ್ಪರ ಸಖ್ಯ ಮಾಡಿಕೊಳ್ಳುವ ಸಾಧ್ಯತೆ ಮತ್ತೆ ಸೃಷ್ಟಿಯಾಗಿದ್ದು ರಾಜಕೀಯ ಕ್ಷೇತ್ರದಲ್ಲಿ ಮತ್ತೊಮ್ಮೆ ಕುತೂಹಲ ಕೆರಳುವಂತೆ ಮಾಡಿದೆ. ದಿಲ್ಲಿ, ಹರಿಯಾಣ ರಾಜ್ಯಗಳಲ್ಲಿ ಸಖ್ಯ ಮಾಡಿಕೊಂಡು ಸ್ಪರ್ಧಿಸುವ ವಿಚಾರದಲ್ಲಿ ಎರಡು ಪಕ್ಷಗಳು ಮುಂದಿನ ದಿನಗಳಲ್ಲಿ ಅಂತಿಮ ತೀರ್ಮಾನಕ್ಕೆ ಬರಲಿವೆ ಎಂದು ಮೂಲಗಳು ತಿಳಿಸಿವೆ. ದಿಲ್ಲಿಗೆ ಪೂರ್ಣ ರಾಜ್ಯದ ಸ್ಥಾನಮಾನ ನೀಡಬೇಕೆಂಬ ಆಮ್ ಆದ್ಮಿಯ ಬೇಡಿಕೆಯನ್ನು ಕಾಂಗ್ರೆಸ್ ಬೆಂಬಲಿಸಲಿದೆ ಎಂದು ಸೂಚನೆ ಲಭಿಸಿದೆ. ಆದರೆ ಸೀಟು ಹಂಚಿಕೆಯ ವಿಚಾರದಲ್ಲಿ ತೀರ್ಮಾನ ಇನ್ನೂ ಅಂತಿಗೊಂಡಿಲ್ಲ ಎಂದು ಮೂಲಗಳು ಹೇಳಿವೆ.












