ಮಹಾ ಸಖ್ಯಕ್ಕೆ ಮರಳಲು ಬಯಸಿದ್ದ ನಿತೀಶ್ ಕುಮಾರ್!- ಲಾಲು ಪ್ರಸಾದ್ ಯಾದವ್ ಹೇಳಿಕೆಯನ್ನು ಬೆಂಬಲಿಸಿದ ಪುತ್ರ ತೇಜಸ್ವಿ ಯಾದವ್

0
1204

ಪಾಟ್ನ,ಎ.5: ರಾಷ್ಟ್ರೀಯ ಜನತಾದಳ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪುನಃ ಮಹಾಸಖ್ಯಕ್ಕೆ ಮರಳಲು ಬಯಸಿದ್ದರು, ತಾನು ಅದಕ್ಕೆ ಅವಕಾಶ ನೀಡಲಿಲ್ಲ ಎಂದು ಹೇಳಿದ್ದಾರೆ. ಲಾಲೂರ ಹೇಳಿಕೆಯನ್ನು ಅವರ ಪುತ್ರ ಮತ್ತು ಆರ್‍ಜೆಡಿ ನಾಯಕ ತೇಜಸ್ವೀ ಯಾದವ್ ಬೆಂಬಲಿಸಿದ್ದಾರೆ. ನಾನು ಅದಕ್ಕೆ ಅವಕಾಶ ನೀಡಲಿಲ್ಲ. ಯಾಕೆಂದರೆ ನಿತೀಶ್ ಕುಮಾರ್‍ರ ಬಗ್ಗೆ ಭರವಸೆ ಇರಿಸುವಂತಿರಲಿಲ್ಲ ಎಂದು ಲಾಲು ಪ್ರಸಾದ್ ಯಾದವ್ ಹೇಳಿದರು.

ಲಾಲು ಪ್ರಸಾದ್‍ರ ಆತ್ಮಕಥೆ ‘ಗೋಪಾಲ್‍ಗಂಜ್ ಟು ಯಾಯ್‍ಸಿನಾ:ಮೈ ಪೊಲಿಟಿಕಲ್ ಜರ್ನಿ’ ಶೀಘ್ರದಲ್ಲಿ ಬಿಡುಗಡೆಯಾಗಲಿದೆ. ಈ ವಿಷಯವನ್ನು ಲಾಲು ಪ್ರಸಾದ್ ಯಾದವ್ ತನ್ನ ಪುಸ್ತಕದಲ್ಲಿ ಬರೆದಿದ್ದಾರೆ. ನಿತೀಶ್ ಕುಮಾರ್ ತನ್ನ ಪಾರ್ಟಿಯ ಉಪಾಧ್ಯಕ್ಷ ಪ್ರಶಾಂತ್ ಕಿಶೋರ್‍ರನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಐದು ಬಾರಿ ತನ್ನ ಬಳಿಗೆ ಕಳುಹಿಸಿದ್ದರು ಎಂದು ಲಾಲು ಹೇಳಿದ್ದಾರೆ.

ಒಂದು ವೇಳೆ ಜೆಡಿಯುಗೆ ಲಿಖಿತ ಬೆಂಬಲ ಕೊಡುವುದಾದರೆ ಬಿಜೆಪಿಯಿಂದ ಹೊರಬಂದು ಮಹಾ ಸಖ್ಯವನ್ನು ಸೇರುವ ಚಿಂತನೆ ನಡೆಸುವುದಾಗಿ ಪ್ರಶಾಂತ್ ಕಿಶೋರ್ ಬಿಂಬಿಸಲು ಯತ್ನಿಸಿದರೆಂದು ಲಾಲು ತಿಳಿಸಿದರು. ಲಾಲು ಪ್ರಸಾದ್‍ರ ಹೇಳಿಕೆಯ್ನನು ಅವರ ಕಿರಿಪುತ್ರ ತೇಜಸ್ವಿಯಾದವ್ ಬೆಂಬಲಿಸಿದ್ದಾರೆ. ನಾನು ಸಂಪೂರ್ಣ ಜವಾಬ್ದಾರಿಯಲ್ಲಿ ಹೇಳುತ್ತೇನೆ. ನಿತೀಶ್ ಕುಮಾರ್ ನಮ್ಮ ಬಳಿಗೆ ಮರಳಲು ಮತ್ತು ಮೈತ್ರಿ ಮಾಡಿಕೊಳ್ಳಲು ಪ್ರಯತ್ನಿಸಿದರು. ಅವರು ಎನ್‍ಡಿಎಗೆ ಹೋಗಿ ಆರು ತಿಂಗಳಲ್ಲೇ ಅಲ್ಲಿಂದ ಮರಳುವ ಯತ್ನ ನಡೆಸಿದರು ಎಂದು ತೇಜಸ್ವಿ ಹೇಳಿದರು.