ರಿಯಾದ್: ಅಪೂರ್ವ ಪ್ರತಿಭೆಗಳನ್ನು ಹೊಂದಿರುವ ವಿದೇಶಿ ಪ್ರಜೆಗಳನ್ನು ಸೌದಿಗೆ ಆಕರ್ಷಿಸುವ ಸಲುವಾಗಿ ದೀರ್ಘಕಾಲ ಇಖಾಮ ಯೋಜನೆಗೆ ಸೌದಿ ಅರೇಬಿಯದ ಸಾಮಾಜಿಕ ಕಲ್ಯಾಣ ಸಚಿವಾಲಯ ಹಸಿರು ನಿಶಾನೆ ತೋರಿಸಿದೆ. ಅಂತಾರಾಷ್ಟ್ರ ಮಟ್ಟದ ಅಪೂರ್ವ ಪ್ರತಿಭೆಗಳನ್ನು, ತಜ್ಞರನ್ನು ಸೌದಿಗೆ ಆಕರ್ಷಿಸುವ ಉದ್ದೇಶದಿಂದ ದೀರ್ಘಕಾಲೀನ ಇಖಾಮ ನೀಡುವ ಮತ್ತು ಗೋಲ್ಡನ್ ಕಾರ್ಡ್ ಯೋಜನೆಯನ್ನು ರೂಪಿಸಲಾಗುತ್ತಿದ್ದು ತಜ್ಞರಿಂದ ಅಭಿಪ್ರಾಯವನ್ನು ಸಚಿವಾಲಯ ಸಂಗ್ರಹಿಸುತ್ತಿದೆ.
ಗೋಲ್ಡನ್ ಕಾರ್ಡ್ ಪಡೆದವರಿಗೆ ಸೌದಿ ಅರೇಬಿಯದಲ್ಲಿ ಸುದೀರ್ಘಕಾಲ ತಂಗುವ ಅವಕಾಶವನ್ನು ಪಡೆಯುತ್ತಾರೆ. ಅವರಿಗೆ ಸಿಗುವ ಸೌಲಭ್ಯಗಳ ಕುರಿತು ನಂತರ ಪ್ರಕಟಿಸಲಾಗುವುದು. ಇದೇ ವೇಳೆ ದೀರ್ಘಕಾಲ ಇಖಾಮದ ಕಾಲ ಮಿತಿ ಎಷ್ಟು ಎಂದು ಸಚಿವಾಲಯ ಸ್ಪಷ್ಟಪಡಿಸಿಲ್ಲ. ಯಾವ ಕ್ಷೇತ್ರಗಳ ಪ್ರತಿಭೆಗಳಿಗೆ ದೀರ್ಘಕಾಲ ಇಖಾಮ ನೀಡಲಾಗುವುದು ಎಂದು ತಜ್ಞರು ಅಭಿಪ್ರಾಯ ನೀಡಿದ ಬಳಿಕ ಸಚಿವಾಲಯ ಅಂತಿಮ ತೀರ್ಮಾನ ಕೈಗೊಳ್ಳುತ್ತದೆ. ತದನಂತರ 32 ತಿಂಗಳು ಕಳೆದ ಯೋಜನೆ ಜಾರಿಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.












