“ನಮಗೆ ದೇಶಭಕ್ತಿ ಕಲಿಸಲು ಬರಬೇಡಿ”- ಪ್ರಧಾನಿ ಮೋದಿಗೆ ಎಚ್ಚರಿಸಿದ ಸೋನಿಯಾ ಗಾಂಧಿ

0
1755

ಹೊಸದಿಲ್ಲಿ,ಎ.6: ನಮಗೆ ದೇಶ ಭಕ್ತಿ ಕಲಿಸಲು ಪ್ರಯತ್ನಿಸಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಹೇಳಿದ್ದಾರೆ. ದಿಲ್ಲಿಯಲ್ಲಿ ನಡೆದ ಒಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ಅವರು ಮಾತಾಡುತ್ತಿದ್ದರು. ದೇಶದಲ್ಲಿ ಸರಕಾರ ಬದಲಾಯಿಸುವ ಅಗತ್ಯ ಸೃಷ್ಟಿಯಾಗಿದೆ. ಭಾಷಾಧಾರಿತವಾಗಿಯೂ ದೇಶವನ್ನು ವಿಭಜಿಸುವ ಕೆಲಸಕ್ಕೆ ಬಿಜೆಪಿ ಮುಂದಾಗಿದೆ ಅವರು ಆರೋಪಿಸಿದರು. ಸೋನಿಯಾ ಗಾಂಧಿ ಎಪ್ರಿಲ್ 11ರಂದು ಸೋನಿಯಾಗಾಂಧಿ ರಾಯ್‍ಬರೇಲಿ ಲೋಕಸಭಾ ಸ್ಥಾನದಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.

ರಾಯ್‍ಬರೇಲಿಯಲ್ಲಿ ಸೋನಿಯಾರ ವಿರುದ್ಧ ಮಾಜಿ ಕಾಂಗ್ರೆಸ್ಸಿಗ ದಿನೇಶ್ ಸಿಂಗ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ದಿನೇಶ್ ಸಿಂಗ್‍ರನ್ನು ಗಾಂಧಿ ಕುಟುಂಬದ ನಿಕಟವರ್ತಿಯೆಂದು ತಿಳಿಯಲಾಗುತ್ತಿತ್ತು. ಅವರು ಕಾಂಗ್ರೆಸ್ಸಿನ ರಾಜ್ಯಸಭಾ ಸದಸ್ಯ ಕೂಡ ಆಗಿದ್ದಾರೆ. ಅವರು ಇತ್ತೀಚೆಗೆ ಬಿಜೆಪಿ ಸೇರಿದ್ದು ಸೋನಿಯಾ ವಿರುದ್ಧ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.