ತಾನೂರ್,ಎ.8: ಸಂಘಪರಿವಾರಕ್ಕೆ ಪ್ರಜಾಪ್ರಭುತ್ವದೊಂದಿಗೆ ತೀವ್ರ ಅಸಹಿಷ್ಣುತೆಯಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು. ಜಾತ್ಯತೀತತೆಯ ದೃಢತೆಯ ಬಗ್ಗೆ ಆರೆಸ್ಸೆಸ್, ಬಿಜೆಪಿಗೆ ಅರಿವಾಗಲಿದೆ. ನರೇಂದ್ರ ಮೋದಿ ಸರಕಾರವನ್ನು ಕೆಳಗಿಳಿಸಬೇಕು ಮತ್ತು ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕಾಗಿದೆ ಎಂದು ಪಿಣರಾಯಿ ವಿಜಯನ್ ಈ ಸಂದರ್ಭದಲ್ಲಿ ಹೇಳಿದರು. ಕೇವಲ ಸರಕಾರ ಬದಲಾವಣೆಯನ್ನು ಬಯಸಿಲ್ಲ. ಬದಲಿ ನೀತಿಯನ್ನು ಜಾರಿಗೊಳಿಸಲು ಜಾತ್ಯತೀತ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕಾಗಿದೆ. ಆದರೆ ಮಾತ್ರವೇ ಜನರಿಗೆ ಪ್ರಯೋಜನವಾಗಲಿದೆ ಎಂದು ಪಿಣರಾಯಿ ವಿಜಯನ್ ಹೇಳಿದರು.












