ಕಾಶ್ಮೀರದಲ್ಲಿ 400 ರಾಜಕೀಯ ನಾಯಕರಿಗೆ ಪುನಃ ಪೊಲೀಸ್ ಸಂರಕ್ಷಣೆ: ಸರಕಾರದ ಮುಖ್ಯ ಕಾರ್ಯದರ್ಶಿ ನಿರ್ಧಾರ

0
724

ಶ್ರೀನಗರ,ಎ.8: ಜಮ್ಮು ಕಾಶ್ಮೀರದ 400 ರಾಜಕೀಯ ನಾಯಕರಿಗೆ ಪುನಃ ವಿಶೇಷ ಪೊಲೀಸ್ ಸುರಕ್ಷೆಯನ್ನು ಒದಗಿಸಲಾಗಿದೆ. ಫೆಬ್ರುವರಿಯಲ್ಲಿ ನಡೆದಿದ್ದ ಪುಲ್ವಾಮ ದಾಳಿಯ ಹಿನ್ನೆಲೆಯಲ್ಲಿ ಈ ನಾಯಕರಿಗೆ ನೀಡಲಾಗಿದ್ದ ಸುರಕ್ಷೆಯನ್ನು ಹಿಂಪಡೆಯಲಾಗಿತ್ತು. ಈಗ ಪುನಃ ಅವರಿಗೆ ಪೊಲೀಸ್ ಸುರಕ್ಷೆಯನ್ನು ಒದಗಿಸಲಾಗಿದೆ.

ಸರಕಾರದ ಮುಖ್ಯ ಕಾರ್ಯದರ್ಶಿ ಬಿವಿ ಸುಬ್ರಹ್ಮಣ್ಯನ್ ರಾಜಕಾರಣಿಗಳಿಗೆ ಸುರಕ್ಷೆಯನ್ನು ಮರುಸ್ಥಾಪಿಸುವ ನಿರ್ಧಾರ ತೆಗೆದುಕೊಂಡರು. ರಾಜ್ಯದಲ್ಲಿನ ರಾಜಕೀಯ ಪಾರ್ಟಿಗಳು ದೂರು ನೀಡಿದ ಹಿನ್ನೆಲೆಯಲ್ಲಿ ಸುರಕ್ಷೆಯನ್ನು ಮರುಸ್ಥಾಪಿಸಲಾಗಿದೆ. ತಮ್ಮ ಪ್ರಮುಖ ನಾಯಕರ ಸುರಕ್ಷೆ ಅಪಾಯದಲ್ಲಿದೆ ಎಂದು ಬೆಟ್ಟು ಮಾಡಿ ರಾಜಕೀಯ ಪಾರ್ಟಿಗಳು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದವು. ಚುನಾವಣೆಯನ್ನು ಬುಡಮೇಲುಗೊಳಿಸುವುದು ಮತ್ತು ರಾಜಕೀಯ ಕಾರ್ಯಕರ್ತರ ಜೀವ ಅಪಾಯಯಕ್ಕೀಡುವ ಉದ್ದೇಶದಲ್ಲಿ ಸುರಕ್ಷೆಯನ್ನು ಹಿಂಪಡೆಯಲಾಗಿತ್ತು ಎಂದು ಪಾರ್ಟಿಗಳು ಆರೋಪಿಸುತ್ತಿವೆ. ಪುಲ್ವಾಮ ದಾಳಿಯ ಬಳಿಕ ಹಲವಾರು ರಾಜಕೀಯ ನಾಯಕರು ಮತ್ತು ಪ್ರತ್ಯೇಕವಾದಿ ನಾಯಕರ ಪೊಲೀಸ್ ಸುರಕ್ಷೆಯನ್ನು ರಾಜ್ಯಪಾಲರು ಹಿಂಪಡೆದುಕೊಂಡಿದ್ದರು. ದೇಶವನ್ನು ವಿಭಜಿಸಲು ಯತ್ನಿಸುವವರಿಗೆ ಸರಕಾರಿ ವೆಚ್ಚದಲ್ಲಿ ಸುರಕ್ಷೆ ನೀಡಬೇಕಾಗಿಲ್ಲ ಎಂದು ಹೇಳಿ ಸುರಕ್ಷೆಯನ್ನು ಹಿಂಪಡೆದುಕೊಳ್ಳಲಾಗಿತ್ತು. ಎಪ್ರಿಲ್ 11ರಿಂದ ಮೇ 6 ರವರೆಗೆ ಕಾಶ್ಮೀರದಲ್ಲಿ ಐದು ಹಂತಗಳಲ್ಲಿ ಚುನಾಣೆ ನಡೆಯಲಿದೆ.