ಕಾಶ್ಮೀರವನ್ನು ತೆರೆದ ಜೈಲು ಮಾಡಲು ಬಿಡುವುದಿಲ್ಲ- ಕಾಶ್ಮೀರದ ರಾಜಕೀಯ ಪಕ್ಷಗಳು

0
1559

ಜಮ್ಮು&ಕಾಶ್ಮೀರ,ಎ.8: ರಾಜಕೀಯ ಭಿನ್ನಾಭಿಪ್ರಾಯಗಳನ್ನು ದೂರವಿಟ್ಟು ಜಮ್ಮು ಕಾಶ್ಮೀರದ ರಾಜಕೀಯ ಪಾರ್ಟಿಗಳೆಲ್ಲ ಎರಡು ವಾರಗಳಿಂದ ಇರುವ ಸಿವಿಲಿಯನ್ ಟ್ರಾಫಿಕ್ ನಿಷೇಧವನ್ನು ಒಗ್ಗೂಡಿ ವಿರೋಧಿಸಿವೆ. ನಿಷೇಧಾಜ್ಞೆಯ ವಿರುದ್ಧ ಪ್ರತಿಭಟನೆ ನಡೆಸಬೇಕೆಂದು ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ರಾಜ್ಯದ ಜನರಿಗೆ ಕರೆ ನೀಡಿದರು.

“ಜನರೊಡನೆ ತನ್ನ ಮನವಿಯೇನೆಂದರೆ, ಈ ನಿಷೇಧಾಜ್ಞೆಯ ವಿರುದ್ಧ ನೀವು ಪ್ರತಿಕ್ರಿಯಿಸಬೇಕಾಗಿದೆ. ನೀವು ಹೋಗ ಬೇಕಾದಲ್ಲೆಲ್ಲ ನೀವು ಹೋಗಿರಿ . ನಾವು ಈ ನಿಷೇಧಾಜ್ಞೆಯನ್ನು ಕೋರ್ಟಿನಲ್ಲಿ ಪ್ರಶ್ನಿಸುತ್ತೇವೆ ಎಂದು” ಎಂದು ಅವರು ಹೇಳಿದರು.

“ಇದು ಕಾಶ್ಮೀರವಾಗಿದೆ. ಫೆಲಸ್ತೀನಲ್ಲ, ನಮ್ಮ ಪ್ರೀತಿಯ ಊರನ್ನು ಒಂದು ತೆರೆದ ಜೈಲನ್ನಾಗಿ ಮಾಡಲು ಬಿಡುವುದಿಲ್ಲ” ಎಂದು ಪೀಪಲ್ಸ್ ಡೆಮಕ್ರಾಟಿಕ್ ಪಾರ್ಟಿಯ ಮುಖ್ಯಸ್ಥೆ ಹಾಗೂ ಇತರ ನಾಯಕರು ಟ್ವೀಟ್ ಮಾಡಿದ್ದಾರೆ.ನಿಷೇಧಾಜ್ಞೆ ಬುದ್ಧಿಗೇಡಿತನದ್ದು ಎಂದು ಉಮರ್ ಅಬ್ದುಲ್ಲ ಟ್ವೀಟ್ ಮಾಡಿದ್ದು ನಿಷೇಧಾಜ್ಞೆಯಿಂದ ಜನರಿಗೆ ಆಗುವ ಅಸೌಕರ್ಯಗಳನ್ನು ಬೆಟ್ಟು ಮಾಡಿದ್ದಾರೆ.

ಜಮ್ಮು ಕಾಶ್ಮೀರ ಬಿಜೆಪಿ ಸಖ್ಯದ ನಾಯಕರಲ್ಲೊಬರಾದ ಸಜ್ಜಾದ್ ಲೋನ್ ನಿಷೇಧಾಜ್ಞೆಯನ್ನು ಮಾನವೀಯ ದುರಂತ ಎಂದು ಕರೆದಿದ್ದು ಆದಷ್ಟು ಶೀಘ್ರ ತೆರವುಗೊಳಿಸುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ. ಬುಧವಾರ ಮತ್ತು ರವಿವಾರ ಬಾರಮುಲ್ಲದಿಂದ ಉಧಂಪುರದವರೆಗೆ ಹೈವೆಯಲ್ಲಿ ಸುರಕ್ಷಾ ವ್ಯವಸ್ಥೆ ಏರ್ಪಡಿಸಲಾಗುವುದು ಎಂದು ಸರಕಾರ ಈ ಹಿಂದೆಯೇ ಸೂಚಿಸಿತ್ತು. ಪ್ರಯಾಣ ನಿಷೇಧ ಖಚಿತಪಡಿಸಲಿಕ್ಕಾಗಿ ಭದ್ರತಾ ಪಡೆಗಳು 270 ಕಿಲೊಮೀಟರ್ ದೂರದ ಹೈವೆಯಲ್ಲಿ ಪ್ರಯಾಣಿಸಿತ್ತು.