ಬಿಜೆಪಿಗೆ ಶೇ.90ರಷ್ಟು ಮತ ಸಿಗಬೇಕು; ಇಲ್ಲದಿದ್ದರೆ ಹಿಂಸಾಚಾರ ಎದುರಿಸಲು ಸಿದ್ಧರಾಗಿ”- ಮಣಿಪುರದಲ್ಲಿ ಗ್ರಾಮಸ್ಥರಿಗೆ ಬೆದರಿಕೆಯೊಡ್ಡಿದ ಕುಕಿ ನ್ಯಾಶನಲ್ ಆರ್ಮಿ

0
2234

ಮಣಿಪುರ,ಎ.8: ಶೇ. 90ರಷ್ಟು ಮತಗಳು ಮಣಿಪುರದ ಗ್ರಾಮಗಳಿಂದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ನೀಡಬೇಕೆಂದು ಕುಕಿ ನ್ಯಾಶನಲ್ ಆರ್ಮಿ(ಕೆನ್‍ಎ) ಬೆದರಿಕೆ ಹಾಕಿದೆ. ಶೇ.90ರಷ್ಟು ಮತಗಳು ಬಿಜೆಪಿಗೆ ಕೊಡದಿದ್ದರೆ ಶಿಕ್ಷೆ ಮತ್ತು ನಂತರದ ಪರಿಣಾಮ ಅನುಭವಿಸಬೇಕಾದೀತೆಂದು ಕುಕಿ ಆರ್ಮಿಯು ಬೆದರಿಕೆ ಹಾಕಿತು.

ಮೊರೆಯಿಯ ಮುಅನ್ನಫೈ ಗ್ರಾಮದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಕೆಎನ್‍ಐಯ ಚೀಫ್ ಕಮಾಂಡರ್ ತಾಂಗ್‍ಬೊಯಿ ಹಾವೊಕಿಪ್ ಈ ರೀತಿ ಬೆದರಿಕೆ ಹಾಕಿದ್ದಾರೆ. ಗ್ರಾಮದ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಿದ್ದರು. ಬಿಜೆಪಿ ಅಭ್ಯರ್ಥಿ ಬೆಂಜಮಿನ್‍ರಿಗೆ ಕುಕಿ ಆರ್ಮಿ ಮತ ಯಾಚಿಸಿ ಬೆದರಿಕೆಯೊಡ್ಡಿದೆ.

21 ಪೊಲಿಂಗ್ ಬೂತ್‍ಗಳನ್ನೊಳಗೊಂಡ ಮೊರೆ ಪ್ರದೇಶದ ಮತದಾನ ಪ್ರಮಾಣವನ್ನು ಪರಿಶೀಲಿಸಲಾಗುವುದ. ಕನಿಷ್ಠ ಶೇ.90ರಷ್ಟು ಮತಗಳು ಬಿಜೆಪಿಗೆ ಬೀಳಬೇಕು ಎಂದು ಕುಕಿ ಆರ್ಮಿ ಹೇಳಿದೆ. ಅದರ ಸೈನ್ಯದಲ್ಲಿ 200ರಷ್ಟು ಮಹಿಳೆಯರು ಕೂಡ ಸಜ್ಜಾಗಿದ್ದಾರೆ. ಮತದಾನ ದಿವಸ ಪೊಲೀಸ್ ಇಲಾಖೆಗೆ ಮಹಿಳೆಯರನ್ನು ಒದಗಿಸುತ್ತೇವೆ ಎಂದು ಕಮಾಂಡರ್ ಹಾವೊಕಿಪ್ ಹೇಳಿದರು. ಚುನಾವಣೆಯ ದಿವಸ ಗುಂಡು ಹಾರಾಟ ನಡೆಯುವ ಸಾಧ್ಯತೆಯನ್ನು ಕೂಡ ಅವರು ತಿರಸ್ಕರಿಸಲಿಲ್ಲ.