ಕುವೈಟ್: ವಿದೇಶಿಯರಲ್ಲಿ ಆತ್ಮಹತ್ಯೆ ಹೆಚ್ಚಳಕ್ಕೆ ಖಿನ್ನತೆಯೇ ಕಾರಣ!- ತಜ್ಞರು

0
855

ಕುವೈಟ್ ಸಿಟಿ,ಎ.8: ವಿದೇಶಿಯರಲ್ಲಿ ಆತ್ಮಹತ್ಯೆ ಪ್ರವೃತ್ತಿ ಹೆಚ್ಚಳವಾಗಿದ್ದು ಇದಕ್ಕೆ ಖಿನ್ನತೆ ಪ್ರಧಾನ ಕಾರಣವಾಗಿದೆ. ಕುವೈಟ್ ನಿವಾಸಿಗಳಲ್ಲಿ ಶೇ. 9ರಷ್ಟು ಮಂದಿ ಖಿನ್ನತೆಯನ್ನು ಅನುಭವಿಸುತ್ತಿದ್ದಾರೆ ಎಂದು ಕುವೈಟ್ ಆರೋಗ್ಯ ಸಚಿವಾಲಯದ ಲೆಕ್ಕಗಳು ಬಹಿರಂಗಗೊಳಿಸಿವೆ. ಸರಿಯಾದ ಕೌನ್ಸಲಿಂಗ್ ಮೂಲಕ ಮತ್ತು ಸರಿಯಾದ ರೀತಿಯ ಮಾನಸಿಕ ಧೈರ್ಯ ನೀಡುವುದಾದರೆ ಇವರನ್ನು ಸಾಧಾರಣ ಜೀವನಕ್ಕೆ ಕರೆತರಲು ಸಾಧ್ಯವಿದೆ ಎಂದು ಆರೋಗ್ಯ ಕ್ಷೇತ್ರದ ತಜ್ಞರು ಹೇಳುತ್ತಿದ್ದಾರೆ.

ವಿಶ್ವ ಆರೋಗ್ಯ ಸಂಘಟನೆಯ ಲೆಕ್ಕದ ಪ್ರಕಾರ ಹದಿನೈದರಿಂದ 29 ವರ್ಷ ವರೆಗಿನವರು ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕೆಲಸದಲ್ಲಿನ ಕಷ್ಟ, ಊರಿನಿಂದ ದೀರ್ಘಕಾಲ ದೂರ ಇರುವುದು ವಿದೇಶಿಗಯರಲ್ಲಿ ಖಿನ್ನತೆಗೆ ಕಾರಣವಾಗಿದೆ. ಸಾಮಾಜಿಕ ಮಾಧ್ಯಮಗಳ ಅತೀವ ಬಳಕೆ ಮಾನಸಿಕ ತೊಳಲಾಟ ಹೆಚ್ಚಲು ಕಾರಣವಾಗುತ್ತಿದೆ ಎಂದು ಅಧ್ಯಯನಗಳು ತಿಳಿಸಿವೆ.