ಮಲಪ್ಪುರಂನಲ್ಲಿ ಸಹೋದರಿಯರ ಸಹಿತ ಮೂವರು ಮಕ್ಕಳು ನೀರಲ್ಲಿ ಮುಳುಗಿ ಮೃತ್ಯು

0
836

ಮಲಪ್ಪುರಂ, ಎ. 8: ಎರಡು ಬೇರೆ ಬೇರೆ ಘಟನೆಗಳಲ್ಲಿ ಸಹೋದರಿಯರ ಸಹಿತ ಮೂವರು ಮಕ್ಕಳು ಸ್ನಾನಕ್ಕೆ ತೆರಳಿದ ವೇಳೆ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಕಡಲುಂಡಿ ಹೊಳೆಯಲ್ಲಿ ಆನೆಕ್ಕಯ ಎಂಬಲ್ಲಿ ಸ್ನಾಕ್ಕೆ ತೆರಳಿದ್ದ ಫಾತಿಮಾ ಫಿದಾ(14), ಫಾತಿಮಾ ನಿದಾ(12) ನೀರಲ್ಲಿ ಮುಳುಗಿ ಮೃತಪಟ್ಟಿರುವ ಬಾಲಕಿಯರು. ಇನ್ನೊಂದು ಘಟನೆಯಲ್ಲಿ ವಳಂಚೇರಿ ವೆಂಗಾಡ್ ಕ್ವಾರಿಯಲ್ಲಿ ಸ್ನಾನಕ್ಕೆ ಹೋದ ನಾಲ್ಕನೆ ತರಗತಿ ವಿದ್ಯಾರ್ಥಿ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಫಾತಿಮಾ ಫಿದಾ ಮತ್ತು ಫಾತಿಮಾ ನಿದಾ ತಾಯಿಯ ಜೊತೆ ಆನಕ್ಕಯ ಚೆಕ್‍ಡ್ಯಾಮ್ ಸಮೀಪ ಸ್ನಾನಕ್ಕೆ ಬಂದಿದ್ದರು. ಸ್ನಾನ ಮಾಡುವೆ ವೇಳೆ ಫಾತಿಮಾ ನಿದಾ ಮುಳುಗಿದ್ದಾಳೆ. ನಂತರ ಸಹೋದರಿಯನ್ನು ರಕ್ಷಿಸಲು ಯತ್ನಿಸಿದ ಫಿದಾಳ ಕೂಡ ನೀರಿನಲ್ಲಿ ಮುಳುಗಿದಳು.ತಾಯಿಯ ಬೊಬ್ಬೆ ಕೇಳಿ ಓಡಿ ಬಂದ ಊರವರು ಇಬ್ಬರನ್ನು ನೀರಿನಿಂದ ಹೊರತೆಗೆದು ಆಸ್ಪತ್ರೆಗೆ ಕರೆದುಕೊಂಡರೂ ಜೀವ ಉಳಿಸಲು ಸಾಧ್ಯವಾಗಿಲ್ಲ.