ಬಿಜೆಪಿ ಸಂವಿಧಾನದ 370ನೇ ವಿಧಿಯನ್ನು ತೆರವುಗೊಳಿಸಲಿ, ನಾವು ಸ್ವತಂತ್ರರಾಗುತ್ತೇವೆ- ಫಾರೂಕ್ ಅಬ್ದುಲ್ಲ

0
1563

ಶ್ರೀನಗರ,ಎ.8: ನ್ಯಾಶನಲ್ ಕಾನ್ಫರೆನ್ಸ್ ಮುಖ್ಯಸ್ಥ ಡಾ. ಫಾರೂಕ್ ಅಬ್ದುಲ್ಲ ಸಂವಿಧಾನದ 370ನೆ ವಿಧಿ ಮತ್ತು ಪರಿಚ್ಛೇದ 35 ಎಯನ್ನು ರದ್ದು ಪಡಿಸುವ ಬಿಜೆಪಿಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಬಿಜೆಪಿ ಪದೇ ಪದೇ ಇದನ್ನು ರದ್ದು ಪಡಿಸಿಯೇ ಬಿಡುತ್ತೇವೆ ಎಂದು ಹೇಳುತ್ತಿದೆ. ರದ್ದುಪಡಿಸುವುದಿದ್ದರೆ ರದ್ದುಪಡಿಸಲಿ ನಾವು ಸ್ವತಂತ್ರರಾಗುತ್ತೇವೆ ಎಂದು ಅವರು ಹೇಳಿದರು. ಹೊಸದಿಲ್ಲಿ ಏನು ವಿಚಾರ ಮಾಡಿದೆ 370ನೆ ವಿಧಿಯನ್ನು ರದ್ದು ಪಡಿಸಿದರೆ ನಾವು ಸುಮ್ಮನಿರುತ್ತೇವೆ ಎಂದು ತಿಳಿದಿದೆಯೇ? ಹಾಗೆ ಆಗುವುದಿಲ್ಲ. ನಾವು ಹೋರಾಡುತ್ತೇವೆ. ಅವರು ಹಾಗೆ ಮಾಡಲಿ ನಮ್ಮ ಹೋರಾಟಕ್ಕೆ ಅವರು ಸ್ವಯಂ ದಾರಿ ಮಾಡಿಕೊಡುತ್ತಿದ್ದಾರೆ.

ಶ್ರೀನಗರದ ಮುನಾರಾಬಾದ್‍ನಲ್ಲಿ ಸಾರ್ವಜನಿಕ ಸಭೆಯಲ್ಲಿ ಫಾರೂಕ್ ಅಬ್ದುಲ್ಲ ಮಾತಾಡುತ್ತಿದ್ದರು. ಸಂವಿಧಾನದ 370ನೆಯ ವಿಧಿ ಕುರಿತು ಚರ್ಚೆ ವಿವಾದಕ್ಕೆ ಹೊರಳುತ್ತಿದೆ. ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ 370ನೇ ವಿಧಿಯನ್ನು ರದ್ದು ಪಡಿಸುವ ಮಾತು ಆಡುತ್ತಿದೆ. ಬನ್ನಿ, ಅವರು ಏನು ಮಾಡುತ್ತಾರೆ ನೋಡೋಣ ಎಂದು ಫಾರೂಕ್ ಅಬ್ದುಲ್ಲ ಬಿಜೆಪಿಗೆ ಸವಾಲು ಹಾಕಿದ್ದಾರೆ.