ಬ್ರಾಹ್ಮಣ ಸಮುದಾಯವನ್ನು ನಿರ್ಲಕ್ಷಿಸಿದ ಬಿಜೆಪಿಯೊಂದಿಗೆ ಆರ್ ಎಸ್ ಎಸ್ ಗೆ ಮುನಿಸು: ನ್ಯಾಷನಲ್ ಹೆರಾಲ್ಡ್ ವಿಶ್ಲೇಷಣೆ

0
732

ಧೈರ್ಯ ಮಹೇಶ್ವರಿ

ಕನ್ನಡಕ್ಕೆ: ಆಯಿಷತುಲ್ ಅಫೀಫಾ

ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ಇತರ ಹಲವು ರಾಜ್ಯಗಳಲ್ಲಿ ಬ್ರಾಹ್ಮಣ ನಾಯಕರನ್ನು ನಿರ್ಲಕ್ಷಿಸಿರುವ ಕುರಿತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ ಎಸ್ ಎಸ್)ವು ಬಿಜೆಪಿ ಕೇಂದ್ರ ನಾಯಕತ್ವಕ್ಕೆ ತನ್ನ ಅತೃಪ್ತಿಯನ್ನು ತಿಳಿಸಿದೆ ಎಂದು ಆರ್ ಎಸ್ ಎಸ್ ಮೂಲಗಳು ನ್ಯಾಷನಲ್ ಹೆರಾಲ್ಡ್ ಗೆ ತಿಳಿಸಿವೆ.

ಉತ್ತರದ ರಾಜ್ಯಗಳಲ್ಲಿ ಹಲವಾರು ಬ್ರಾಹ್ಮಣ ಸಂಸದರನ್ನು ನಿರ್ಲಕ್ಷಿಸಿರುವುದು ಬಿಜೆಪಿ ಪಕ್ಷದ ಭವಿಷ್ಯದ ಮೇಲೆ ಪರಿಣಾಮ ಬೀರಬಹುದು ಎಂದು ನಾಗ್ಪುರ ಮೂಲದ ರಾಷ್ಟ್ರೀಯತಾವಾದಿ ಪಕ್ಷವು ಬಿಜೆಪಿ ಅಧ್ಯಕ್ಷ ಅಮಿತ್ ಷಾಗೆ ಹೇಳಿರುವುದಾಗಿ ತಿಳಿದುಬಂದಿದೆ. ಬಿಜೆಪಿ ನೇತೃತ್ವದ ಎನ್ಡಿಎ ಹಲವಾರು ಸ್ಥಾನಗಳನ್ನು ಗೆಲ್ಲಲು ನೆರವಾದ 2014 ರ ನರೇಂದ್ರ ಮೋದಿಯವರ ಅಭಿಯಾನದ ಹಿಂದೆ ಬ್ರಾಹ್ಮಣ ಸಮುದಾಯದ ಶ್ರಮ ಇತ್ತು ಎಂದು ಆರ್ ಎಸ್ ಎಸ್ ಬಿಜೆಪಿಯನ್ನು ನೆನಪಿಸಿದೆ ಎಂದು ಹೇಳಲಾಗಿದೆ.

“ಬಿಜೆಪಿ ಅದರ ಬ್ರಾಹ್ಮಣ ನಾಯಕರನ್ನು ಮೂಲೆಗೆ ಸರಿಸುತ್ತಿದ್ದೆ. ಅವರಲ್ಲಿ ಕೆಲವರು ಅನುಭವಿ ಹಿರಿಯ ನಾಯಕರು. ಮತ್ತೊಂದೆಡೆ ಕಾಂಗ್ರೆಸ್, ಬ್ರಾಹ್ಮಣ ಸಮುದಾಯದ ಧ್ವನಿಯನ್ನು ಆಲಿಸುತ್ತಿದೆ. ಉನ್ನತ ಆರ್ ಎಸ್ ಎಸ್ ಮೂಲಗಳ ಪ್ರಕಾರ,

ಬಿಹಾರದಲ್ಲಿ, ಬಿಜೆಪಿ ತನ್ನ ಮೈತ್ರಿ ಜನತಾ ದಳ (ಸಂಯುಕ್ತ ) ಕ್ಕೆ ಅವಕಾಶ ಕಲ್ಪಿಸಲು ವಾಲ್ಮೀಕಿ ನಗರದ ಹಾಲಿ ಬಿಜೆಪಿ ಸಂಸದ ಸತೀಶ್ ದುಬೆ ಅವರನ್ನು ಮೂಲೆಗುಂಪಾಗಿಸಿದೆ. ಬಿಜೆಪಿ ತನ್ನ ಮಿತ್ರ ಪಕ್ಷಕ್ಕಾಗಿ ತ್ಯಾಗ ಮಾಡಿದ ಐದು ಸ್ಥಾನಗಳಲ್ಲಿ ನಾವಡಾ, ಜಂಝರ್ಪುರ್, ದರ್ಬಂಗ ಮತ್ತು ಗೋಪಾಲ್ಗಂಜ್ ಜೊತೆ ವಾಲ್ಮೀಕಿ ನಗರ ಕ್ಷೇತ್ರವು ಒಂದು.

ಉತ್ತರಪ್ರದೇಶದಲ್ಲಿ ಹಿರಿಯ ಮುಖಂಡ ಮುರಳಿ ಮನೋಹರ್ ಜೋಶಿ ಅವರನ್ನು ಕಾನ್ಪುರದಿಂದ ಎರಡನೆಯ ಅವಧಿಗೆ ನಾಮನಿರ್ದೇಶನ ಮಾಡದೆ ನಿರ್ಲಕ್ಷಿಸಿರುವುದು ಆರ್ ಎಸ್ ಎಸ್ ಅಸಹನೆಗೆ ಕಾರಣವಾಗಿದೆ. ಮತ್ತೊಬ್ಬ ಹಿರಿಯ ಮುಖಂಡ ಮತ್ತು ದೇವ್ರಿಯಾದ ಬಿಜೆಪಿ ಸಂಸದ, ಕಲರಾಜ್ ಮಿಶ್ರಾ ಅವರು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅಮಿತ್ ಷಾ ಅವರ ಬೆಂಬಲವಿಲ್ಲದಿರುವುದು ಇದಕ್ಕೆ ಕಾರಣ.

ಜಾರ್ಖಂಡ್ನಲ್ಲಿ ಬಿಜೆಪಿ ಅದರ ಮಿತ್ರ ಪಕ್ಷ ಜಾರ್ಖಂಡ್ ವಿದ್ಯಾರ್ಥಿಗಳ ಒಕ್ಕೂಟ ಕ್ಕೆ ಅವಕಾಶ ನೀಡಲು ತನ್ನ ಪ್ರಬಲ ಸ್ಥಾನವಾದ ಗಿರಿಧಿಯನ್ನು ತ್ಯಾಗಮಾಡಿದೆ.ಹಾಲಿ ಎಂಪಿ ರವೀಂದ್ರಕುಮಾರ್ ಪಾಂಡೆಯವರು ಬ್ರಾಹ್ಮಣ ಸಮುದಾಯದ ಇನ್ನೊಂದು ಪ್ರಮುಖ ಮುಖ.

ಮೂಲಗಳ ಪ್ರಕಾರ ಕರ್ನಾಟಕದಲ್ಲಿ, 28 ವರ್ಷದ ತೇಜಸ್ವಿ ಸೂರ್ಯನಿಗಾಗಿ ಬ್ರಾಹ್ಮಣ ಸಮುದಾಯದ ದಿವಂಗತ ಅನಂತ್ ಕುಮಾರ್ ರ ಪತ್ನಿ ತೇಜಸ್ವಿನಿ ಅವರಿಗೆ ಟಿಕೆಟ್ ನಿರಾಕರಿಸಿದ್ದು ಕೂಡಾ ಆರ್ ಎಸ್ ಎಸ್ ಗೆ ಒಪ್ಪಿಗೆಯಿರಲಿಲ್ಲ ಎಂದು ಹೇಳಲಾಗಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಷಾ ಸೂರ್ಯನನ್ನುನಿಯೋಜಿಸುವ ನಿರ್ಧಾರವನ್ನು ನೇರವಾಗಿ ತೆಗೆದುಕೊಂಡಿದ್ದಾರೆ.

ಸೌಜನ್ಯ: ನ್ಯಾಷನಲ್ ಹೆರಾಲ್ಡ್