ಬಿಜನೋರ್,ಎ.9: ಉತ್ತರ ಪ್ರದೇಶ ಬಿಜನೋರಿನಲ್ಲಿ ಪ್ರಿಯಾಂಕಾ ಗಾಂಧಿ ಅವರ ರೋಡ್ ಶೋ ವೇಳೆ ಕೆಲ ಹೊತ್ತು ಕೆಲವು ಬಿಜೆಪಿ ಕಾರ್ಯಕರ್ತರು ಪರಿಸ್ಥಿತಿ ಉದ್ವಿಗ್ನಗೊಳ್ಳುವಂತೆ ಮಾಡಿದ್ದಾರೆ. ಕಾಂಗ್ರೆಸ್ ಬೆಂಬಲಿಗರು ನೆರದಿದ್ದ ವೇಳೆ ಅಲ್ಲಿಗೆ ಬಂದ ಕೆಲವು ಬಿಜೆಪಿ ಬೆಂಬಲಿಗರು ಮೋದಿ ಮೋದಿ ಎಂದು ಕೂಗ ತೊಡಗಿದರು. ಅಷ್ಟರವರೆಗೆ ಶಾಂತವಾಗಿದ್ದ ಪರಿಸ್ಥಿತಿಯನ್ನು ಕೆಡಿಸಿ ಹಾಕಿದ್ದಾರೆ. ಡಾಕ್ಖಾನಾ ಎಂಬಲ್ಲಿ ಮಂಗಳವಾರ ಮಧ್ಯಾಹ್ನ ಕಾಂಗ್ರೆಸ್ ಬೆಂಬಲಿಗರೊಂದಿಗೆ ಪ್ರಿಯಾಂಕಾ ರೋಡ್ ಶೋ ತೆರಳಲು ಸಿದ್ಧರಾಗುತ್ತಿದ್ದಾಗ ಘಟನೆ ನಡೆದಿದೆ.
ಇದೇ ವೇಳೆ, ಅಲ್ಲಿನ ಒಂದು ಅಂಗಡಿಯ ಬಳಿ ಕೆಲವರು ನಿಂತು ಮೋದಿ, ಮೋದಿ ಎಂದು ಕೂಗಲು ಆರಂಭಿಸಿದರು. ಇದನ್ನು ಕೇಳಿದ ಕಾಂಗ್ರೆಸ್ ಬೆಂಬಲಿಗರು ಅವರ ಬಳಿ ಬಂದು ಮೋದಿ ಚೋರ್ ಎಂದು ಘೋಷಣೆ ಕೂಗಿದರು. ಪರಿಸ್ಥಿತಿ ಉದ್ವಿಗ್ನವಾಗುತ್ತಿದೆ ಎಂದನಿಸಿದಾಗ ಪೊಲೀಸರು ಬಿಜೆಪಿ ಬೆಂಬಲಿಗರನ್ನು ಅಂಗಡಿಯೊಳಗೆ ಹೋಗಲು ಹೇಳಿ ಬಾಗಿಲು ಮುಚ್ಚಿದರು. ನಂತರ ತುಂಬ ಕಷ್ಟಪಟ್ಟು ಕಾಂಗ್ರೆಸ್ ಬೆಂಬಲಿಗರನ್ನು ಸಮಧಾನ ಗೊಳಿಸಿದ್ದಾರೆ.












