ಅಲ್ಪಸಂಖ್ಯಾತ ಆಯೋಗವನ್ನು ಹೊಂದಿರದ ಏಕೈಕ ರಾಜ್ಯ ಗುಜರಾತ್: ಸದ್ದು ಮಾಡಿದ ಗುಜರಾತ್ ಮುಸ್ಲಿಮರ ಬೇಡಿಕೆಗಳು- ದ ವೈರ್

0
1069

ರಾಜೀವ್ ಖನ್ನಾ

ಆಯಿಷತುಲ್ ಅಫೀಫಾ

ಕಳೆದ ಎರಡು ದಶಕಗಳಲ್ಲಿ, ಗುಜರಾತ್ ಎಂಬ ಪ್ರಯೋಗಾಲಯದಲ್ಲಿ ಕೋಮು ಧ್ರುವೀಕರಣವನ್ನು ಸಾಧಿಸುವಲ್ಲಿ ಹಿಂದುತ್ವ ಪಡೆಗಳು ಯಶಸ್ವಿಯಾಗಿದೆ.

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ, ರಾಜ್ಯದಲ್ಲಿ ಮುಸ್ಲಿಮರು ತಮ್ಮ ಸುರಕ್ಷತೆ ಮತ್ತು ಜೀವನೋಪಾಯವನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ, ಅಂದರೆ, ಅವರಿಗೆ ಸಾಂವಿಧಾನಿಕವಾಗಿ ನೀಡಿರುವ ಹಕ್ಕುಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ.

ಕಳೆದ ಕೆಲವು ದಿನಗಳಿಂದ, ವಿವಿಧ ಗುಂಪುಗಳು ಮತ್ತು ಸಂಘಟನೆಗಳು ರಾಜ್ಯದ ಮುಸ್ಲಿಮರು ವಿವಿಧ ರಾಜಕೀಯ ಪಕ್ಷಗಳಿಂದ ಬಯಸುವ ಕೋರಿಕೆಗಳನ್ನು ಸೂಚಿಸುವ ಘೋಷಣಾ ಪತ್ರಗಳನ್ನು ಬಿಡುಗಡೆ ಮಾಡಿದ್ದಾರೆ.

ಅಂತಹ ಬೇಡಿಕೆಗಳಲ್ಲಿ ಒಂದಾಗಿದೆ ಎಸ್ಸಿ / ಎಸ್ಟಿ (ದೌರ್ಜನ್ಯ ತಡೆ) ಕಾಯಿದೆ, 1989 ರ ದೌರ್ಜನ್ಯ ತಡೆಗಟ್ಟುವಿಕೆ ಕಾನೂನಿನ ಜಾರಿಗೊಳಿಸುವಿಕೆ, ಅದು ಈ ಸಮುದಾಯಕ್ಕೆ ವಿರುದ್ಧವಾದ ಅಪರಾಧಗಳನ್ನು ಜಾಮೀನು ರಹಿತ ಅಪರಾಧವನ್ನಾಗಿ ಮಾಡುತ್ತದೆ. ಈ ಬೇಡಿಕೆಯನ್ನು ಅಲ್ಪಸಂಖ್ಯಾತ ಸಮನ್ವಯ ಸಮಿತಿ ಗುಜರಾತ್ ಮತ್ತು ಅಲ್ಪ ಸಂಖ್ಯಾಕ್ ಅಧಿಕಾರ್ ಮಂಚ್ ಶಕ್ತವಾಗಿ ಮುಂದಿರಿಸಿದೆ.

“ಹಲವಾರು ವರ್ಷಗಳಿಂದ ಮುಸ್ಲಿಮರು ಸಂಘಟಿತ ಹಿಂಸೆಯನ್ನು ಎದುರಿಸುತ್ತಿದ್ದಾರೆ. ಅದರ ಸದಸ್ಯರು ಧರಿಸುವ ಉಡುಪಿಗೆ ಮತ್ತು ಅವರು ತಿನ್ನುವ ಆಹಾರಕ್ಕಾಗಿ ಸಮುದಾಯವನ್ನು ಗುರಿಪಡಿಸಲಾಗಿದೆ. ಅವರನ್ನು ಸಮಾಜದ ಭಾಗವಾಗಿ ಪರಿಗಣಿಸುತ್ತಿಲ್ಲ. ಅಸ್ಪೃಶ್ಯರು ಎಂಬಂತೆ ಪರಿಗಣಿಸಲ್ಪಡುತ್ತಿದ್ದಾರೆ ” ಎಂದು ಅಲ್ಪಸಂಖ್ಯಾತ ಸಮನ್ವಯ ಸಮಿತಿ ಯ ಮುಜಾಹಿದ್ ನಫೀಸ್ ಹೇಳುತ್ತಾರೆ. ಇದು ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪ್ರತಿಪಾದಿಸಲು ಡಿಸೆಂಬರ್ 2016 ರಲ್ಲಿ ಸ್ಥಾಪಿಸಲಾದ ಒಂದು ಸಡಿಲ-ರಚನಾತ್ಮಕ ವೇದಿಕೆ.

ಕೋಮು ಗಲಭೆ ನಿರಂತರವಾಗಿ ರಾಜ್ಯದಲ್ಲಿ ಮುಂದುವರಿದಿದೆ ಎಂಬ ಅಂಶದಿಂದಾಗಿ ಪ್ರಧಾನ ಕಾಳಜಿಯು ಭದ್ರತೆಯಾಗಿ ಉಳಿದಿದೆ. ಈ ಕಾರಣದಿಂದಾಗಿ ಕೋಮು ಹಿಂಸಾಚಾರದ ವಿರುದ್ಧ ಕಾನೂನು, ಪ್ರತಿಭಟನೆಗಳ ಮೇಲೆ ನಿಷೇಧ, ಶಸ್ತ್ರಾಸ್ತ್ರಗಳ ತರಬೇತಿ ಮತ್ತು ವಿತರಣೆ ಜೊತೆಗೆ ಪೋಲಿಸ್ ಎನ್ಕೌಂಟರ್ಗಳನ್ನು ತನಿಖೆ ಮಾಡಲು ನ್ಯಾಯಾಂಗ ಆಯೋಗವನ್ನು ಸ್ಥಾಪಿಸುವಂತೆ ಒತ್ತಾಯಿಸಲಾಗಿದೆ.

ನಾಗರಿಕ ಹಕ್ಕುಗಳ ರಕ್ಷಣಾ ಸಂಸ್ಥೆಯನ್ನು ಪ್ರತಿನಿಧಿಸುವ ಜಮಾತ್-ಎ -ಇಸ್ಲಾಮಿ ಹಿಂದ್ ನ ಇಕ್ರಮ್ ಮಿರ್ಜಾ ,ಹೇಳುತ್ತಾರೆ, “ತಾರತಮ್ಯವು ಪರಮಾವಧಿಯನ್ನು ತಲುಪಿದೆ” ಹಾಗಾಗಿ ಸುರಕ್ಷತೆ ಮತ್ತು ಭದ್ರತೆ ಅತಿದೊಡ್ಡ ಕಾಳಜಿಯಾಗಿ ಉಳಿದಿದೆ. ಅವರು ಮತ್ತಷ್ಟು ಹೇಳಿದರು, “ಇದು ಕೇವಲ ಭದ್ರತೆ ಮಾತ್ರವಲ್ಲ. ಶಿಕ್ಷಣ, ಆರೋಗ್ಯ ಮತ್ತು ನೈರ್ಮಲ್ಯದಂತಹ ನಮ್ಮ ಇತರ ಹಕ್ಕುಗಳನ್ನು ನಿರಾಕರಿಸುತ್ತಿದ್ದಾರೆ. ಸಮುದಾಯದಲ್ಲಿ ಸುಮಾರು 80% ರಷ್ಟು ಮಹಿಳೆಯರು ಅಪೌಷ್ಟಿಕತೆಯಿಂದ ಮತ್ತು ಕ್ಷಯರೋಗದಿಂದ ಬಳಲುತ್ತಿದ್ದಾರೆ ಎಂಬುವುದು ತಿಳಿದಿರುವ ಸತ್ಯ. ಇದನ್ನು ಸುಧಾರಿಸಲು ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ ಉತ್ತಮ ಆಸ್ಪತ್ರೆಗಳು ಮತ್ತು ಶಾಲೆಗಳು ಇರಬೇಕು. ನಮ್ಮ ಮಕ್ಕಳಿಗೆ ಇತರ ಸಮುದಾಯಗಳು ನಡೆಸುತ್ತಿರುವ ಖಾಸಗಿ ಶಾಲೆಗಳಲ್ಲಿ ಶಿಕ್ಷಣವನ್ನು ನಿರಾಕರಿಸಲಾಗಿದೆ ಮತ್ತು ರಾಜಕೀಯ ಅಥವಾ ಸಾಮಾಜಿಕ ಕಾರ್ಯಕ್ರಮಗಳಿಗಾಗಿ ಕೊಠಡಿಗಳನ್ನು ಬಾಡಿಗೆಗೆ ಪಡೆಯುವಲ್ಲಿ ಮತ್ತು ಇತರ ಸ್ಥಳಗಳಲ್ಲಿ ನಾವು ತುಂಬಾ ಸಮಸ್ಯೆಗಳನ್ನು ಎದುರಿಸುತ್ತೇವೆ.”

ಈ ಸನ್ನಿವೇಶದಲ್ಲಿ ಸಾಚಾರ್ ಸಮಿತಿಯು ತನ್ನ ವರದಿಯಲ್ಲಿ ತಿಳಿಸಿರುವ ಸಮಾನ ಅವಕಾಶಗಳ ಆಯೋಗವನ್ನು ಸ್ಥಾಪಿಸಲು ಬೇಡಿಕೆಯಿದೆ.

ಅಲ್ಪಸಂಖ್ಯಾತ ಸಮನ್ವಯ ಸಮಿತಿಯು 1992 ರ, ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಆಕ್ಟ್,ನ ತಿದ್ದುಪಡಿಯನ್ನು ಕೋರಿದೆ. ಇದರಿಂದಾಗಿ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಲಾಗುತ್ತದೆ. ದೇಶಾದ್ಯಂತ ರಾಜ್ಯ ಅಲ್ಪಸಂಖ್ಯಾತರ ಆಯೋಗಗಳನ್ನು ಸ್ಥಾಪಿಸುವುದು ಕಡ್ಡಾಯ ಮಾಡಬೇಕೆಂದು ಕೇಳಿದೆ. ರಾಜ್ಯ ಅಲ್ಪಸಂಖ್ಯಾತ ಆಯೋಗವನ್ನು ಹೊಂದಿರದ ರಾಜ್ಯಗಳಲ್ಲಿ ಗುಜರಾತ್ ಒಂದಾಗಿದೆ.

ಅಲ್ಪಸಂಖ್ಯಾತ ಜನಸಂಖ್ಯೆಯನ್ನು ಹೊಂದಿರುವ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯ, ಶಿಕ್ಷಣ, ಉದ್ಯೋಗ ಮತ್ತು ಭದ್ರತೆಯ ವಿಷಯಗಳ ಬಗ್ಗೆ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವನ್ನು ರಾಜ್ಯದಲ್ಲಿ ಪ್ರಾರಂಭಿಸಲು ಅಲ್ಪಸಂಖ್ಯಾಕ್ ಅಧಿಕಾರ್ ಮಂಚ್ ಪ್ರಯತ್ನಿಸುತ್ತಿದೆ . 11.5% ರಷ್ಟು ಗುಜರಾತ್ ಜನಸಂಖ್ಯೆಯು ಅವಕಾಶ ವಂಚಿತರಾಗಿದ್ದಾರೆಂದು ಸಂಸ್ಥೆಯು ಹೇಳಿಕೊಂಡಿದೆ.

ಸಮುದಾಯವು ಉದ್ದೇಶಿಸಿರುವ ಮತ್ತೊಂದು ಮುಖ್ಯವಾದ ವಿಷಯವು ಅಂತರ-ಧಾರ್ಮಿಕ ಮತ್ತು ಅಂತರ-ಜಾತಿಯ ವಿವಾಹಗಳ ವಿಷಯವಾಗಿದೆ. ಇಂತಹ ದಂಪತಿಗಳು ನಿರಂತರ ಕಿರುಕುಳಕ್ಕೊಳಗಾಗುವ ಬೆದರಿಕೆಯನ್ನು ಎದುರಿಸುತ್ತಿದ್ದಾರೆ, ಸಮುದಾಯವು ಅದಕ್ಕಾಗಿ ” ಸಾಮಾಜಿಕ ಅಸ್ತಿತ್ವಗಳ ಪ್ರತಿರಕ್ಷೆಯನ್ನು ಕೊನೆಗೊಳಿಸುವ ಒಂದು ಸಮಾನಾಂತರ ಕಾನೂನನ್ನು ಮತ್ತು ಧರ್ಮ ಜಾತಿ ಅಥವಾ ಲಿಂಗ ಹೆಸರಿನಲ್ಲಿ ಹಿಂಸೆಯನ್ನು ಪ್ರಯೋಗಿಸಿ ವಿವಾಹ ಮುರಿಯುವವರ ವಿರುದ್ಧ ಒಂದು ಕಾನೂನನ್ನು ಬಯಸುತ್ತಿದೆ.

ಇತರ ಬೇಡಿಕೆಗಳು ಸಮುದಾಯದ ಸಾಮಾಜಿಕ-ಆರ್ಥಿಕ ಏಳಿಗೆಗೆ ಸಂಬಂಧಿಸಿದಂತೆ – ಅಲ್ಪಸಂಖ್ಯಾತರಿಗೆ ರಾಜ್ಯದ ಬಜೆಟ್ನಲ್ಲಿ ಹಂಚಿಕೆ ಮಾಡಲು ವಿಶೇಷ ಘಟಕ ಯೋಜನೆ ಮತ್ತು ಪ್ರಧಾನ ಮಂತ್ರಿಯ ಹೊಸ 15-ಅಂಶ ಕಾರ್ಯಕ್ರಮದ ವಿಸ್ತರಣೆಯೊಂದಿಗೆ ಸೂಕ್ತ ಅನುಷ್ಠಾನ.

ಸಣ್ಣ ಸಾಲಗಳು ಮತ್ತು ಅಗತ್ಯವಿದ್ದಾಗ ನೆರವು ಸಕ್ರಿಯಗೊಳಿಸಲು ಅಲ್ಪಸಂಖ್ಯಾತ ಹಣಕಾಸು ಮತ್ತು ಅಭಿವೃದ್ಧಿ ನಿಗಮವನ್ನು ಬಲಪಡಿಸಬೇಕೆಂದು ಸಹ ಸಂಸ್ಥೆಗಳು ಬಯಸುತ್ತವೆ., ನಿರ್ದಿಷ್ಟವಾಗಿ, ಅವರು ರಾಜಕೀಯ ಅಸ್ಪೃಶ್ಯತೆಯ ಬಲಿಪಶುಗಳಾಗಿರುವುದಾಗಿ ಆರೋಪಿಸುತ್ತಾ, ಅಳಿವಿನಅಂಚಿನಲ್ಲಿರುವ ಇತರ ಸಮುದಾಯಗಳನ್ನು ಸೇರಿಸಿ ಸಮುದಾಯವು ರಾಜಕೀಯ ವಲಯದಲ್ಲಿ ಅದರ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಲು ಒಂದು ಕಾನೂನನ್ನು ಬಯಸುತ್ತಿದೆ.

ರಾಜ್ಯದಲ್ಲಿನ ರಾಜಕೀಯ ಪಕ್ಷಗಳು ಅವರ ಬೇಡಿಕೆಯನ್ನು ತೆಗೆದುಕೊಳ್ಳುತ್ತವೆಯೇ ಎಂದು ನೋಡಬೇಕಿದೆ, ಆದರೆ ಕುಸಿದಿರುವ ಗುಜರಾತಿ ಮುಸ್ಲಿಮರ ಚಿಕ್ಕ ಆಗ್ರಹಗಳನ್ನು ಸಹ ಅನುಷ್ಠಾನಗೊಳಿಸುವುದೂ ಕೂಡ ಬಹಳ ದೂರದಲ್ಲಿದೆ ಎಂಬುವುದು ಸ್ಪಷ್ಟವಾಗಿದೆ.

ಸೌಜನ್ಯ: ದಿ ವೈರ್