ಹೊಸದಿಲ್ಲಿ,ಎ.10: ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಜೀವನ ಚರಿತ್ರೆ ಸಿನೆಮಾ ಬಿಡುಗಡೆಗೆ ನಿಷೇಧ ಹೇರಲಾಗಿದೆ. ನಾಳೆ ಬಿಡುಗಡೆಯಾಗಬೇಕಾಗಿದ್ದ ಸಿನೆಮಾಕ್ಕೆ ಚುನಾವಣಾ ಆಯೋಗ ನಿಷೇಧ ಹೇರಿದೆ. ರಾಜಕೀಯ ಲಾಭಕ್ಕಾಗಿ ಜೀವನ ಚರಿತ್ರೆಗಳನ್ನು ಪ್ರದರ್ಶಿಸಲು ಅವಕಾಶ ನೀಡುವುದಿಲ್ಲ ಎಂದು ಆಯೋಗ ತಿಳಿಸಿತು.
ಸೆಂಟ್ರಲ್ ಬೋರ್ಡ್ ಆಫ್ ಫಿಲಿಂ ಸರ್ಟಿಫಿಕೆಟೇಶನ್ ಯುನಿವರ್ಸಲ್ ಸರ್ಟಿಫಿಕೆಟ್ ಪಡೆದ ಬಳಿಕ ಸಿನೆಮಾದ ಬಿಡುಗಡೆಯನ್ನು ಚುನಾವಣಾ ಆಯೋಗ ತಡೆದಿದೆ. ಸಿನೆಮಾ ಬಿಡುಗಡೆಯಾಗದಂತೆ ನೋಡಿಕೊಳ್ಳಬೇಕೆಂದು ನಿನ್ನೆ ಸುಪ್ರೀಂಕೋರ್ಟು ತಿಳಿಸಿದೆ. ಚುನಾವಣಾ ಆಯೋಗ ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕಾಗಿದೆ ಎಂದು ಕೋರ್ಟು ಹೇಳಿತ್ತು.












