ಹೊಸದಿಲ್ಲಿ,ಎ.10: ರಫೇಲ್ ಪ್ರಕರಣದಲ್ಲಿ ಕೇಂದ್ರ ಸರಕಾರಕ್ಕೆ ಹಿನ್ನಡೆಯಾಗಿದ್ದು ರಫೇಲ್ ಪ್ರಕರಣದಲ್ಲಿ ಹೊಸ ದಾಖಲೆಗಳನ್ನು ಪರಿಗಣಿಸಬಾರದು ಎನ್ನುವ ಕೇಂದ್ರ ಸರಕಾರದ ಆಗ್ರಹವನ್ನು ಸುಪ್ರೀಂ ಕೋರ್ಟು ತಳ್ಳಿ ಹಾಕಿದೆ. ಮರು ಪರಿಶೀಲನಾ ಅರ್ಜಿಯ ಜೊತೆ ಹೊಸ ದಾಖಲೆಗಳನ್ನು ಕೂಡ ಪರಿಗಣಿಸಬೇಕೆಂದು ಕೋರ್ಟು ಆದೇಶ ಹೊರಡಿಸಿದೆ. ವಿವರವಾದ ಆಲಿಕೆ ನಡೆಸಿದ ಬಳಿಕ ಮರು ಪರಿಶೀಲನಾ ಅರ್ಜಿಯಲ್ಲಿ ಅಂತಿಮ ತೀರ್ಮಾನ ಬರಲಿದೆ. ಸುಪ್ರೀಂಕೋರ್ಟಿನ ಚೀಫ್ ಜಸ್ಟಿಸ್ ರಂಜನ್ ಗೊಗೊಯ್ ಅಧ್ಯಕ್ಷತೆಯ ಮೂವರು ಸದಸ್ಯರ ಪೀಠವು ಪ್ರಕರಣದ ವಿಚಾರಣೆ ನಡೆಸುತ್ತಿದೆ.
ರಫೇಲ್ ದಾಖಲೆಗಳು, ರಹಸ್ಯ ದಾಖಲೆಗಳಾಗಿದ್ದು, ರಕ್ಷಣಾ ಸಚಿವಾಲಯದ ಬಳಿಯಿರುವ ದಾಖಲೆಗಳನ್ನು ಅಧಿಕೃತ ರಹಸ್ಯ ಕಾನೂನು ಉಲ್ಲಂಘಿಸಿ ದಿ ಹಿಂದೂ ಪತ್ರಿಕೆ ಪ್ರಕಟಿಸಿದೆ. ಇವು ಕಳ್ಳತನವಾದ ದಾಖಲೆಗಳೆಂದು ಕೇಂದ್ರ ಸರಕಾರ ವಾದಿಸಿತು. ಕದ್ದು ಹೋಗಿರುವ ದಾಖಲೆಗಳನ್ನು ಪರಿಶೀಲಿಸಬಾರದು ಎನ್ನುವ ಕೇಂದ್ರದ ಬೇಡಿಕೆಯನ್ನು ಸುಪ್ರೀಂಕೋರ್ಟು ತಿರಸ್ಕರಿಸಿದೆ. ಹೊಸ ಮೂರು ದಾಖಲೆಗಳನ್ನು ಸಲ್ಲಿಸಿ ಇವುಗಳನ್ನು ಕೂಡ ಪರಿಗಣಿಸಿದ ಬಳಿಕ ಮಾತ್ರವೇ ರಫೇಲ್ ಮರು ಪರಿಶೀಲನಾ ಪ್ರಕರಣದಲ್ಲಿ ಅಂತಿಮ ತೀರ್ಪು ನೀಡಬೇಕೆಂದು ಎಂದು ಅರ್ಜಿದಾರರಾದ ಪ್ರಶಾಂತ್ ಭೂಷಣ್ ವಾದಿಸಿದ್ದಾರೆ.
ಆದರೆ ಈ ದಾಖಲೆಗಳು ಕದ್ದು ಹೋದ ದಾಖಲೆಗಳು ಆದ್ದರಿಂದ ಮರು ಪರಿಶೀಲನಾ ಅರ್ಜಿಯನ್ನು ತಿರಸ್ಕರಿಸಬೇಕೆಂದು ಕೇಂದ್ರ ಸರಕಾರ ವಾದಿಸಿತು. ಈ ಹಿಂದೆ ರಫೇಲ್ ಪ್ರಕರಣದಲ್ಲಿ ನರೇಂದ್ರ ಮೋದಿ ಸರಕಾರಕ್ಕೆ ಕ್ಲೀನ್ ಚಿಟ್ ನೀಡುವ ತೀರ್ಪನ್ನು ಕೋಟು ಹೊರಡಿಸಿತ್ತು. ಅದರ ಬೆನ್ನಿಗೆ ದಿ ಹಿಂದೂ ಪತ್ರಿಕೆ ದಾಖಲೆಗಳನ್ನು ಬಹಿರಂಗಪಡಿಸಿ ಪ್ರಧಾನಿಯ ಕಚೇರಿ ಸಮಾಂತರ ಚರ್ಚೆ ನಡೆಸಿತು ಆರೋಪಿಸಿತು. ರಕ್ಷಣಾ ಸಚಿವಾಲಯದ ವಿರೋಧವನ್ನು ಮೀರಿ ಸಮಾಂತರ ಚರ್ಚೆ ನಡೆದಿದೆ ಎಂದು ದಾಖಲೆಗಳಲ್ಲಿವೆ. ಆದ್ದರಿಂದ ತೀರ್ಪನ್ನು ಮರು ಪರಿಶೀಲಿಸಬೇಕಾಗಿದೆ ಎಂದು ಪ್ರಶಾಂತ್ ಭೂಷಣ್, ಮಾಜಿ ಕೇಂದ್ರ ಸಚಿವ ಅರುಣ್ ಜೆಟ್ಲಿ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ.












