‘ಕಾವಲುಗಾರ ಕಳ್ಳನೆಂದು ಮತ್ತೊಮ್ಮೆ ಅರಿವಾಯಿತು’- ರಾಹುಲ್ ಗಾಂಧಿ

0
924

ಹೊಸದಿಲ್ಲಿ,ಎ.10: ರಫೇಲ್ ಯುದ್ಧವಿಮಾನ ವ್ಯವಹಾರದಲ್ಲಿ ಸುಪ್ರೀಂಕೋರ್ಟು ಆದೇಶವನ್ನು ಮುಂದಿಟ್ಟು ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ. ಕಾವಲುಗಾರ ಕಳ್ಳನೆಂದು ಮತ್ತೊಮ್ಮೆ ಅರಿವಾಯಿತು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು. ರಫೇಲ್ ವ್ಯವಹಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವ ವಾದವನ್ನು ಕೋರ್ಟು ಅಂಗೀಕರಿಸಿದೆ. ಇದಕ್ಕಾಗಿ ಕೋರ್ಟಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದರು.

ರಫೇಲ್ ಪ್ರಕರಣದಲ್ಲಿ ಹೊಸ ದಾಖಲೆಗಳನ್ನು ಪರಿಗಣಿಸಬಾರದು ಎಂದು ಕೇಂದ್ರ ಸರಕಾರದ ಬೇಡಿಕೆಯನ್ನು ಸುಪ್ರೀಂ ಕೋರ್ಟು ತಿರಸ್ಕರಿಸಿದೆ. ಮರು ಪರಿಶೀಲನಾ ಅರ್ಜಿಗಳ ಸಹಿತ ಹೊಸ ದಾಖಲೆಗಳನ್ನು ಕೂಡ ಪರಿಗಣಿಸಲಾಗುವುದು ಎಂದು ಕೋರ್ಟು ತಿಳಿಸಿದೆ. ಸುಪ್ರೀಂಕೋರ್ಟಿನ ಚೀಫ್ ಜಸ್ಟಿಸ್ ರಂಜನ್ ಗೊಗೊಯಿ ಅಧ್ಯಕ್ಷತೆಯ ಮೂವರು ಸದಸ್ಯರ ಪೀಠ ಪ್ರಕರಣದ ವಿಚಾರಣೆ ನಡೆಸುತ್ತಿದೆ.