ಕಾಸರಗೋಡು: ಯುವಕಾಂಗ್ರೆಸ್ ಕಾರ್ಯಕರ್ತರ ಕೊಲೆ ಪ್ರಕರಣದಲ್ಲಿ ಸಿಬಿಐ ತನಿಖೆ ಬೇಡ- ಕೇರಳ ಸರಕಾರ

0
1367

ಕಾಸರಗೋಡು,ಎ.12: ಇಲ್ಲಿಗೆ ಸಮೀಪದ ಪೆರಿಯ ಎಂಬಲ್ಲಿ ನಡೆದಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ ಪ್ರಕರಣವನ್ನು ಸಿಬಿಐಯಿಂದ ತನಿಖೆ ಮಾಡಿಸುವ ಅಗತ್ಯವಿಲ್ಲ ಎಂದು ಕೇರಳ ಸರಕಾರ ಹೈಕೋರ್ಟಿಗೆ ತಿಳಿಸಿದೆ. ಪೊಲೀಸರ ವಿಶೇಷ ತನಿಖಾ ತಂಡದ ಮೂಲಕ ಪ್ರಕರಣದಲ್ಲಿ ತನಿಖೆ ಉತ್ತಮ ರೀತಿಯಲ್ಲಿ ನಡೆಯುತ್ತಿದೆ ಎಂದು ಸರಕಾರ ಕೋರ್ಟಿನಲ್ಲಿ ಹೇಳಿತು. ಪ್ರಕರಣದ ತನಿಖಾ ಪ್ರಗತಿಯ ವರದಿಯನ್ನು ಸರಕಾರ ಕೋರ್ಟಿನ ಮುಂದೆ ಹಾಜರುಪಡಿಸಿತು.

ಪೆರಿಯ ಬಳಿ ಯುವಕಾಂಗ್ರೆಸ್ ಕಾರ್ಯರ್ತರಾದ ಕೃಪೇಶ್ ಮತ್ತು ಶರತ್ ಲಾಲ್‍ರನ್ನು ಸಿಪಿಎಂ ಕಾರ್ಯಕರ್ತರೆನ್ನಲಾದವರು ಇತೀಚೆಗೆ ಹತ್ಯೆ ನಡೆಸಿದ್ದರು. ಕೊಲೆ ಘಟನೆಯಲ್ಲಿ ಉನ್ನತ ನಾಯಕರು ಶಾಮೀಲಾಗಿಲ್ಲ. ಪ್ರಧಾನ ಆರೋಪಿಗಳೆಲ್ಲರನ್ನೂ ಬಂಧಿಸಲಾಗಿದೆ ಎಂದು ಸರಕಾರ ಹೇಳಿದೆ. ಆರೋಪಿ ಪೀತಾಂಬರನ್‍ನ ವೈಯಕ್ತಿಕ ದ್ವೇಷ ಕೊಲೆಗೆ ಕಾರಣವಾಗಿತ್ತು ಎಂದು ಹೇಳಲಾಗಿದೆ. ಇದೇ ವೇಳೆ ಕೇರಳ ಸರಕಾರ ಸಿಪಿಎಂ ನಾಯಕ ವಿಪಿಪಿ ಮುಸ್ತಫಾ ಎಂಬವರು ಮಾಡಿದ್ದು ರಾಜಕೀಯ ಭಾಷಣವಾಗಿತ್ತು ಎಂದು ಕೋರ್ಟಿಗೆ ತಿಳಿಸಿದೆ.