ಎರ್ನಾಕುಲಂ,ಎ.22: ಎರ್ನಾಕುಳಂ ಎಲ್ಡಿಎಫ್ ಯುಡಿಎಫ್ ಪ್ರಬಲ ಪ್ರತಿಸ್ಪರ್ಧಿಗಳನ್ನು ಚುನಾವಣಾ ಕಣಕ್ಕಿಳಿಸಿದ್ದು ಕತ್ತು ಕತ್ತಿನ ಹೋರಾಟ ನಡೆಯುವ ನಿರೀಕ್ಷೆಯಿದೆ. ಮತ ಪ್ರಮಾಣ ಹೆಚ್ಚಿಸುವತ್ತ ಎನ್ಡಿಎ ಗಮನಹರಿಸಿದೆ. ಇದೇವೇಳೆ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅತೀಹೆಚ್ಚು ಬಹುಮತ ಗಳಿಸಲು ಯತ್ನಿಸುತ್ತಿದೆ. ಎಲ್ಡಿಎಫ್ನಿಂದ ಇಲ್ಲಿ ಪಿ.ರಾಜೀವ್ ಸ್ಪರ್ಧಿಸುತ್ತಿದ್ದಾರೆ. ಯುಡಿಎಫ್ನಿಂದ ಹೆಬಿ ಈಡನ್ ಸ್ಪರ್ಧಿಸುತ್ತಿದ್ದಾರೆ. ಸಾರ್ವಜನಿಕ ಸ್ವಭಾವ ಮತ್ತು ರಾಜಕೀಯ ವಾತಾವರಣವನ್ನು ಅವಲೋಕಿಸುವಾಗ ಯುಡಿಎಫ್ಗೆ ಮೇಲುಗೈಯಿರುವಂತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ.
ಎರ್ನಾಕುಳಂನಲ್ಲಿ ಲಾಟಿನ್ ಸಭಾದ ಮತದಾರರು ನಿರ್ಣಾಯಕರಾಗಿದ್ದು ಎರ್ನಾಕುಳಂ ಲೋಕಸಭಾ ವ್ಯಾಪ್ತಿಯ ಏಳು ವಿಧಾನಸಭಾ ಕ್ಷೇತ್ರದಲ್ಲಿ ಯುಡಿಎಫ್ ನಾಲ್ಕನ್ನು ಗೆದ್ದುಕೊಂಡಿದೆ. ಇದೇವೇಳೆ ಪಾರ್ಟಿ ಚಿಹ್ನೆಯಲ್ಲಿ ಸ್ಪರ್ಧಿಸಿದವರು ಪ್ರತಿಸ್ಪರ್ಧಿಯನ್ನು ಕಂಪಿಸುವಂತೆ ಮಾಡಿದ ಚರಿತ್ರೆ ಇಲ್ಲಿ ಪುನರಾವರ್ತನೆಯಾಗಲಿದ ಎಂಬ ನಿರೀಕ್ಷೆ ಎಲ್ಡಿಎಫ್ ಪಾಲಯದಲ್ಲಿದೆ.ರಾಜ್ಯಸಭಾ ಸದಸ್ಯ ಎಂಬ ನೆಲೆಯಲ್ಲಿ ರಾಜೀವ್ ಇಲ್ಲಿ ಪ್ರಭಾವಿಯಾಗಿದ್ದಾರೆ. ಇದೇ ವೇಳೆ ಕೇಂದ್ರ ಸಚಿವ ಅಲ್ಫೋನ್ಸ್ ಕಣ್ಣಂದಾನಂರ ಮೂಲಕ ಕ್ರೈಸ್ತ ಮತಗಳ ಧ್ರುವೀಕರಣ ಸಾಧ್ಯತೆಯನ್ನು ಎಲ್ಡಿಎಫ್ ಲೆಕ್ಕಹಾಕಿದೆ.












