ಲಕ್ನೊ,ಎ.29: ವಾರಣಾಸಿ ಲೋಕಸಭಾ ಕ್ಷೇತ್ರದ ಸಮಾಜವಾದಿ ಪಾರ್ಟಿ ತನ್ನ ಅಭ್ಯರ್ಥಿ ಹಿಂಪಡೆದುಕೊಂಡಿದೆ ಮಾಜಿ ಬಿಎಸ್ಎಫ್ ಯೋಧ ತೇಜ್ಬಹಾದೂರ್ರನ್ನು ಬೆಂಬಲಿಸಲು ಸಮಾಜವಾದಿ ಪಾರ್ಟಿ ನಿರ್ಧರಿಸಿದೆ. ಮಹಾಘಟ್ಬಂಧನ್ನ ಅಧಿಕೃತ ಅಭ್ಯರ್ಥಿಯಾಗಿ ತೇಜ್ಬಹಾದೂರ್ ಸ್ಪರ್ಧಿಸಲಿದ್ದಾರೆ ಎಂದು ಸಮಾಜವಾದಿ ಪಾರ್ಟಿ ತಿಳಿಸಿತು. ಇಲ್ಲಿ ಮೊದಲು ಮಹಾಘಟ್ಬಂದನ್ ಅಭ್ಯರ್ಥಿಯಾಗಿ ಶಾಲಿನಿಯಾದವ್ರನ್ನು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಚುನಾವಣಾ ಕಣಕ್ಕಿಳಿಸಲಾಗಿತ್ತು. ಕಾಂಗ್ರೆಸ್ ಕಳೆದ ಬಾರಿಯ ಅಭ್ಯರ್ಥಿ ಅಜಯ್ರಾಯ್ರನ್ನೇ ಅಭ್ಯರ್ಥಿಯನ್ನಾಗಿಸಿದೆ. ಮೋದಿಯ ವಿರುದ್ಧ ಸ್ಪರ್ಧಿಸುವ ಎಂದು ತೇಜ್ಬಹಾದೂರ್ ಈಗಾಗಲೇ ಘೋಷಿಸಿದ್ದರು.
2017ರಲ್ಲಿ ಬಿಎಸ್ಎಫ್ ಕಾನ್ಸ್ಟೇಬಲರ್ ಆಗಿದ್ದ ತೇಜ್ಬಹಾದೂರ್ರನ್ನು ಉದ್ಯೋಗದಿಂದ ತೆಗೆದು ಹಾಕಲಾಗಿತ್ತು. ಸೇನೆಯಲ್ಲಿ ನೀಡುವ ಆಹಾರದ ಕುರಿತು ಅವರು ದೂರಿದ್ದಕ್ಕಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. ಕೆಟ್ಟ ಆಹಾರ ನೀಡಲಾಗುತ್ತಿದೆ ಎಂದು ತೇಜ್ಬಹಾದೂರ್ ಪೋಸ್ಟ್ ಮಾಡಿದ ವೀಡಿಯೊ ವೈರಲ್ ಆದ ನಂತರ ಸೇನೆ ಅವರನ್ನು ಕೆಲಸದಿಂದ ವಜಾ ಮಾಡಿತ್ತು.












