“ಚುನಾವಣಾ ಆಯೋಗದ್ದು ಮೋದಿ ಕೋಡ್ ಆಫ್ ಕಾಂಟಾಕ್ಟ್”- ಎಂದ ಕಾಂಗ್ರೆಸ್!

0
557

ಹೊಸದಿಲ್ಲಿ,ಮೇ 1: ಲೋಕಸಭಾ ಚುನಾವಣೆ ಪ್ರಚಾರದ ಭಾಷಣಗಳಲ್ಲಿ ಪ್ರಧಾನಿ ಮೋದಿಗೆ ಕ್ಲೀನ್ ಚಿಟ್ ನೀಡಿದ ಚುನಾವಣಾ ಆಯೋಗದ ಕ್ರವನ್ನು ಕಾಂಗ್ರೆಸ್ ತೀವ್ರವಾಗಿ ಟೀಕಿಸಿದೆ. ಮಾಡಲ್ ಕೋಡ್ ಆಫ್ ಕಾಂಟೆಕ್ಟ್ ಈಗ ಮೋದಿ ಕೋಡ್ ಆಫ್ ಕಾಂಟೆಕ್ಟ್ ಆಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಚುನಾವಣಾ ನೀತಿ ಸಂಹಿತೆಯನ್ನು ವ್ಯಾಪಕವಾಗಿ ಉಲ್ಲಂಘಿಸಿದ ಪ್ರಧಾನಿಯನ್ನು ಶಿಕ್ಷಿಸದಿರುವುದರಲ್ಲಿ ವಿಷಾದವಿದೆ. ಮೋದಿಗೊಂದುದೇಶದ ಇತರರಿಗೊಂದು ಎಂಬ ಎರಡು ರೀತಿಯ ನಿಯಮಗಳು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದರು.

ಕೇರಳದ ವಯನಾಡಿನಲ್ಲಿ ರಾಹುಲ್ ಗಾಂಧಿಯನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿಸಿದ್ದು ಹಿಂದೂಗಳನ್ನು ಅವಮಾನಿಸಲಿಕ್ಕಾಗಿದೆ ಎಂದು ನರೇಂದ್ರ ಮೋದಿ ಭಾಷಣದಲ್ಲಿ ಹೇಳಿದ್ದರು. ಇದರ ವಿರುದ್ಧ ಕಾಂಗ್ರೆಸ್ ದೂರು ಸಲ್ಲಿಸಿತ್ತು. ಹಾಗಿದ್ದರೂ ಮೋದಿಗೆ ಚುನಾವಣಾ ಆಯೋಗ ಕ್ಲೀನ್ ಚಿಟ್ ನೀಡಿತು. ಮಹಾರಾಷ್ಟ್ರದ ವಾರ್ಧಾದಲ್ಲಿ ಮೋದಿಯ ಭಾಷಣ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಲ್ಲ ಎಂದು ಆಯೋಗ ಮಂಗಳವಾರ ತಿಳಿಸಿತ್ತು.

ಮೋದಿಯ ಹೇಳಿಕೆಯ ಹಿಂದೆಯೇ ವಯನಾಡಿನಲ್ಲಿ ರಾಹುಲ್‍ರ ಅಭ್ಯರ್ಥಿತ್ವವನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕೋಮುವಾದಿ ಪ್ರಚಾರಕ್ಕೆ ಉಪಯೋಗಿಸಿದ್ದರು. ವಯನಾಡ್ ಭಾರತದಲ್ಲಿದೆಯೇ, ಪಾಕಿಸ್ತಾನದಲ್ಲಿದೆಯೇ ಎಂದು ಹೇಳಲಾಗದಂತಹ ಜಾಗದಲ್ಲಿ ರಾಹುಲ್ ಗಾಂಧಿ ಸ್ಪರ್ಧಿಸುತ್ತಿದ್ದಾರೆ ಎಂದು ಅಮಿತ್ ಶಾ ಹೇಳಿದ್ದರು. ಇದರ ವಿರುದ್ಧ ಕಾಂಗ್ರೆಸ್ ದೂರು ನೀಡಿದರೂ ಆಯೋಗ ಕ್ರಮ ಜರಗಿಸಿಲ್ಲ.

ಮೋದಿ, ಅಮಿತ್ ಶಾರ ವಿರುದ್ದ ಸಲ್ಲಿಸಲಾದ ದೂರಿನಲ್ಲಿ ಕ್ರಮ ಜರಗಿಸಿದಿರುವುದನ್ನು ಪ್ರಶ್ನಿಸಿದ ಕಾಂಗ್ರೆಸ್ ಸುಪ್ರೀಂಕೋರ್ಟಿನ ಮೊರೆ ಹೋಗಿದೆ. ಅರ್ಜಿ ಗುರುವಾರಕ್ಕೆ ಸುಪ್ರೀಂಕೋರ್ಟು ಮುಂದೂಡಿದೆ.