ಲಕ್ನೊ, ಮೇ 1: ದೇಶವನ್ನು ಸಂರಕ್ಷಿಸಬೇಕಾದ ವ್ಯಕ್ತಿ ಇಲ್ಲಿ ಗಲಭೆ ಹುಟ್ಟುಹಾಕುತ್ತಿದ್ದಾರೆ ಎಂದು ಸಮಾಜವಾದಿ ಪಾರ್ಟಿ ನಾಯಕಿ ಜಯಾ ಬಚ್ಚನ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಪರೋಕ್ಷವಾಗಿ ಸೂಚಿಸಿ ಜಯಬಚ್ಚನ್ ಆರೋಪ ಹೊರಿಸಿದ್ದಾರೆ. ಹೊಸ ಮುಖ ಅಭ್ಯರ್ಥಿಗಳನ್ನು ಪೂರ್ಣ ಮನಸ್ಸಿನೊಂದಿಗೆ ಸ್ವೀಕರಿಸುವ ಪರಂಪರೆ ಸಮಾಜವಾದಿ ಪಾರ್ಟಿಯದ್ದು. ಹೊಸ ಅಭ್ಯರ್ಥಿಗಲು ಎಲ್ಲಿಂದ ಬಂದರೂ ಅವರು ಪಾರ್ಟಿಯ ಭಾಗವಾಗಿರುತ್ತಾರೆ. ಅವರ ಗೆಲವುವನ್ನು ಖಚಿತ ಪಡಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಲಕ್ನೊದ ಸಮಾಜವಾದಿ ಪಾರ್ಟಿ ಅಭ್ಯರ್ಥಿ ಪೂನಂ ಸಿನ್ಹಾ ಪರವಾಗಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಜಯಾ ಬಚ್ಚನ್ ಹೇಳಿದರು.
ಪೂನಂರನ್ನು ನೀವು ಗೆಲ್ಲಿಸಬೇಕು. ಇಲ್ಲದಿದ್ದರೆ ಮುಂಬೈಗೆ ಮರಳಲು ಪೂನಂ ನನಗೆ ಅನುಮತಿಸಲಾರರು. ತಾನು ಮತ್ತು ಪೂನಂ ನಲ್ವತ್ತು ವರ್ಷಗಳಿಂದ ಉತ್ತಮ ಗೆಳೆಯರಾಗಿದ್ದೇವೆ ಎಂದು ಜಯಾಬಚ್ಚನ್ ಹೇಳಿದರು. ಎಪ್ರಿಲ್ ಹದಿನಾರಕ್ಕೆ ಪೂನಂ ಸಿನ್ಹಾ ಸಮಾಜವಾದಿ ಪಾರ್ಟಿ ಸೇರ್ಪಡೆಯಾಗಿದ್ದಾರೆ. ಲಕ್ನೊದಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್ ವಿರುದ್ಧ ಕಣದಲ್ಲಿದ್ದಾರೆ. ಲಕ್ನೊ ಲೋಕಸಭಾ ಕ್ಷೇತ್ರಕ್ಕೆ ಮೇ. ಆರರಂದು ಚುನಾವಣೆ ನಡೆಯಲಿದ್ದು ಪೂನಂ ಸಿನ್ಹಾ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಶತ್ರುಘ್ನ ಸಿನ್ಹಾರ ಪತ್ನಿಯಾಗಿದ್ದಾರೆ.












