ವಾರಣಾಸಿ,ಮೇ 1: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾರಣಾಸಿಯಿಂದ ಸ್ಪರ್ಧಿಸುತ್ತಿರುವ ತೇಜ್ಬಹಾದೂರ್ ರವರ ನಾಮಪತ್ರವನ್ನು ಜಿಲ್ಲಾ ಚುನಾವಣಾ ಅಧಿಕಾರಿ ತಿರಸ್ಕರಿಸಿದ್ದಾರೆ. ಸಮಾಜವಾದಿ ಪಾರ್ಟಿ ಅಭ್ಯರ್ಥಿಯಾಗಿ ಬಿಎಸ್ಎಫ್ ಮಾಜಿ ಯೋಧ ತೇಜ್ಬಹಾದೂರ್ ನಾಮಪತ್ರ ಸಲ್ಲಿಸಿದ್ದರು. ಬಿಎಸ್ಎಫ್ನಿಂದ ವಜಾಗೊಂಡಿದ್ದನ್ನು ನಾಮಪತ್ರದಲ್ಲಿ ವ್ಯಕ್ತಪಡಿಸಿಲ್ಲ ಎಂದು ಕಾರಣವನ್ನು ಸೂಚಿಸಿ ತೇಜ್ಬಹಾದೂರ್ ನಾಮಪತ್ರ ತಿರಸ್ಕೃತಗೊಳಿಸಲಾಗಿದೆ. ಈ ಹಿಂದೆ ಅವರು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಶಾಲಿನಿ ಯಾದವ್ರನ್ನು ಬದಲಾಯಿಸಿ ಸಮಾಜವಾದಿ ಪಾರ್ಟಿ ತೇಜ್ಬಹಾದೂರ್ಗೆ ಟಿಕೆಟ್ ನೀಡಿತ್ತು. ಚುನಾವಣಾಧಿಕಾರಿ ತಪ್ಪಾದ ರೀತಿಯಲ್ಲಿ ತನ್ನ ನಾಮಪತ್ರವನ್ನು ತಿರಸ್ಕರಿಸಿದ್ದಾರೆ ಎಂದು ತೇಜ್ಬಹಾದೂರ್ ಆರೋಪಿಸಿದರು. ನಿನ್ನೆ 6:15ಕ್ಕೆ ದಾಖಲೆಗಳನ್ನು ಸಲ್ಲಿಸಲು ತನಗೆ ತಿಳಿಸಲಾಯಿತು. ದಾಖಲೆಗಳನ್ನು ಸಲ್ಲಿಸಿದೆ. ಆದರೆ ನಾಮಪತ್ರವನ್ನು ತಿರಸ್ಕರಿಸಲಾಗಿದೆ. ಇದರ ವಿರುದ್ಧ ಸುಪ್ರೀಂಕೋರ್ಟಿನ ಮೊರೆಹೋಗುವೆ ಎಂದು ತೇಜ್ಬಹಾದೂರ್ ತಿಳಿಸಿದರು. ಸೇನೆಯಲ್ಲಿ ಕೆಟ್ಟ ಆಹಾರ ನೀಡಲಾಗುತ್ತಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದ್ದಕ್ಕಾಗಿ ತೇಜ್ಬಹಾದೂರ್ ರವರನ್ನು ಬಿಎಸ್ಎಫ್ನಿಂದ ವಜಾಗೊಳಿಸಲಾಗಿತ್ತು.












