ದೇಶದ ಸುರಕ್ಷೆಯನ್ನು ದೃಢಪಡಿಸುವ ವಿಷಯದಲ್ಲಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ- ಅಖಿಲೇಶ್ ಯಾದವ್

0
499

ಲಕ್ನೊ,ಮೇ 2: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ದೇಶದ ಸುರಕ್ಷೆಯನ್ನು ದೃಢಪಡಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಸಮಾಜವಾದಿ ಪಾರ್ಟಿ ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದರು. ಬಿಜೆಪಿ ಸೈನಿಕರ ಕುರಿತು ಮಾತಾಡುತ್ತದೆ. ಆದರೆ ದಿನಾಲೂ ಗಡಿಯಲ್ಲಿ ಮತ್ತು ನಕ್ಸಲ್ ಪ್ರಭಾವಿ ಸ್ಥಳಗಳಲ್ಲಿ ಯೋಧರ ಹತ್ಯೆ ನಡೆಯುತ್ತಿವೆ. ದಿನಾಲೂ ಯೋಧರಿಗೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡಬೇಕಾಗಿದೆ ಎಂದಿರುವಾಗ ಮೋದಿ ಸರಕಾರ ಯಾವ ರೀತಿಯ ದೇಶ ಸುರಕ್ಷೆಯನ್ನು ಮಾಡುತ್ತಿದೆ ಎಂದು ಅಖಿಲೇಶ್ ಪ್ರಶ್ನಿಸಿದರು.

ಬಿಜೆಪಿಯಂತೆ ದೇಶ ಸುರಕ್ಷೆಯೆಂಬುದು ಹೇಳುತ್ತಾ ತಿರುಗುವ ವಿಷಯವಲ್ಲ. ಸಮಾಜವಾದಿ ಪಾರ್ಟಿ ದೇಶರಕ್ಷಣೆಗೆ ಪ್ರಥಮ ಪರಿಗಣನೆ ನೀಡಲಿದೆ ಎಂದು ಅಖಿಲೇಶ್ ಹೇಳಿದರು.”ನನ್ನ ಜೀವನ ರೀತಿ ಜನರಿಗೆ ತಿಳಿಸಬೇಕಾದ ವಿಷಯವಲ್ಲ. ಏಳು ವರ್ಷ ಸೈನಿಕ ಸ್ಕೂಲ್‍ನಲ್ಲಿ ಕಲಿತವನು ನಾನು. ಗೆಳೆಯರಲ್ಲಿ ಕೆಲವರು ದೇಶಕ್ಕಾಗಿ ವೀರಮೃತ್ಯುವನ್ನಪ್ಪಿದರು. ಪತ್ನಿಯ ತಂದೆ ಅವರ ಜೀವನವನ್ನು ಸೇನೆಗಾಗಿ ವ್ಯಯಿಸಿದರು. ಪತ್ನಿಯ ಸಹೋದರಿ ಮತ್ತು ಪತಿ ಸೇನೆಯಲ್ಲಿ ಕರ್ತವ್ಯ ನಿರತರಾಗಿದ್ದಾರೆ. ನಿಮ್ಮ ಕುಟುಂಬದಿಂದ ಸೇನೆಯಲ್ಲಿ ಎಷ್ಟು ಮಂದಿ ಇದ್ದಾರೆ ಎಂದು ದೇಶ ಪ್ರೇಮವನ್ನು ಹೇಳುತ್ತಾ ತಿರುಗಾಡುವ ಬಿಜೆಪಿಯೊಂದಿಗೆ ತಾನು ಪ್ರಶ್ನಿಸುವೆ ಎಂದು ಅಖಿಲೇಶ್ ಹೇಳಿದರು.

ಕೇಂದ್ರ ಸಚಿವ ನಿತಿನ್ ಗಡ್ಕರಿ ಲಕ್ನೊ-ಆಗ್ರಾ ಎಕ್ಸ್‌ಪ್ರೆಸ್ ಹೈವೆಯಂತಹ ಹೆದ್ದಾರಿಗಳನ್ನು ಹೆಚ್ಚು ನಿರ್ಮಿಸಲಾಗುವುದು ಎಂದಿದ್ದಾರೆ. ಆದರೆ ವಿಮಾನ ಇಳಿಯಲು ಸಾಧ್ಯವಿರುವಂತಹ ಒಂದು ರಸ್ತೆಯನ್ನಾದರೂ ನಿರ್ಮಿಸಲು ಬಿಜೆಪಿ ಸರಕಾರಕ್ಕೆ ಸಾಧ್ಯವಾಯಿತೇ ಎಂದು ಆಖಿಲೇಶ್ ಪ್ರಶ್ನಿಸಿದರು. ಸಮಾಜವಾದಿ ಪಾರ್ಟಿ ಅಧಿಕಾರಕ್ಕೆ ಬಂದರೆ ಸುಖೋಯ್, ಮಿರಾಜ್, ಹಕ್ರ್ಯೂಲಿಸ್ ವಿಮಾನಗಳು ಲಕ್ನೊ-ಆಗ್ರಾ ಎಕ್ಸ್‌ಪ್ರೆಸ್ ವೇಯಲ್ಲಿ ಇಳಿಸಲಾಗುವುದು ಎಂದು ಅವರು ಹೇಳಿದರು.