ಬಿಹಾರದ ಆಭಯಾಶ್ರಮದಲ್ಲಿ ಇನ್ನೂ 11 ಹೆಣ್ಣುಮಕ್ಕಳು ಹತ್ಯೆಯಾಗಿರಬಹುದು- ಸಿಬಿಐ

0
563

ಪಟ್ನಾ,ಮೇ 4: ಬಿಹಾರದ ಹೆಣ್ಣುಮಕ್ಕಳ ಆಶ್ರಮದಲ್ಲಿ ಇನ್ನೂ ಹನ್ನೊಂದು ಮಕ್ಕಳ ಕೊಲೆ ನಡೆದಿರಬಹುದು ಎಂದು ಸಿಬಿಐ ಸುಪ್ರೀಂಕೋರ್ಟಿಗೆ ತಿಳಿಸಿದೆ. ಸಮೀಪದ ಸ್ಮಶಾನದಲ್ಲಿ ಬಾಲಕಿಯರದೆಂದು ಶಂಕಿಸಲಾದ ಎಲುಬುಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸಿಬಿಐ ಸುಪ್ರೀಂಕೋರ್ಟಿಗೆ ಹೊಸ ವರದಿಯನ್ನು ಸಲ್ಲಿಸಿದೆ. ಪ್ರಕರಣದ ಪ್ರಧಾನ ಆರೋಪಿಯಾದ ಬ್ರಿಜೇಶ್ ಠಾಕೂರ್ ಮತ್ತು ಸಂಗಡಿಗರು ಸೇರಿ ಬಾಲಕಿಯರನ್ನು ಕೊಲೆ ಮಾಡಿರಬಹುದು ಎಂದು ವರದಿಯಲ್ಲಿ ಸಿಬಿಐ ಶಂಕಿಸಿದೆ. ಈ ಆಶ್ರಮದಲ್ಲಿ ಹಲವಾರು ಹೆಣ್ಣು ಮಕ್ಕಳು ಅತ್ಯಾಚಾರಕ್ಕೊಳಗಾಗಿದ್ದಾರೆ. ಟಾಟ ಇನ್ಸಿಟಿಟ್ಯೂಟ್ ಆಫ್ ಸೋಶಿಯಲ್ ಸಯನ್ಸ್ ನಡೆಸಿದ ಅಧ್ಯಯನದ ನಂತರ ಘಟನೆ ಬಹಿರಂಗಗೊಂಡಿತ್ತು. ಘಟನೆ ಭಾರೀ ವಿವಾದವಾದ ನಂತರ ರಾಜ್ಯ ಸರಕಾರ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದೆ. ಸಿಬಿಐ ನಡೆಸಿದ ತನಿಖೆಯಲ್ಲಿ ಠಾಕೂರ್ ಸಹಿತ ಹಲವರು ಅಪರಾಧಿಗಳು ಎಂದು ಪತ್ತೆಯಾಗಿದೆ. 21 ಪುಟಗಳ ಆರೋಪ ಪಟ್ಟಿಯನ್ನು ಸಿಬಿಐ ಸುಪ್ರೀಂಕೋರ್ಟಿಗೆ ಸಲ್ಲಿಸಿದೆ.