ಆಮ್ ಆದ್ಮಿಪಾರ್ಟಿಯ 7 ಶಾಸಕರಲ್ಲ, 14 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ- ಕೇಂದ್ರ ಸಚಿವ

0
443

ಹೊಸದಿಲ್ಲಿ,ಮೇ 3: ಆಮ್ ಆದ್ಮಿಪಾರ್ಟಿ ಬುಧವಾರ ಬಿಜೆಪಿಯ ವಿರುದ್ಧ ಆರೊಪ ಹೊರಿಸಿದ್ದು ತಮ್ಮ ಏಳು ಶಾಸಕರನ್ನು ತಲಾ ಹತ್ತು ಕೋಟಿ ರೂಪಾಯಿಗೆ ಖರೀದಿಸುವ ಯತ್ನ ನಡೆಸಿ ಬಿಜೆಪಿ ವಿಫಲಾಗಿದೆ ಎಂದು ಹೇಳಿತ್ತು. ಇದೇವೇಳೆ ಬಿಜೆಪಿ ಹಿರಿಯ ನಾಯಕ ಮತ್ತು ಕೇಂದ್ರ ಸಚಿವ ವಿಜಯ್ ಗೋಯಲ್ ಏಳು ಮಂದಿ ಶಾಸಕರು ಮಾತ್ರವಲ್ಲ ಹದಿನಾಲ್ಕು ಮಂದಿ ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ತೀಕ್ಷ್ಣ ಉತ್ತರ ನೀಡಿದ್ದಾರೆ. ಇದಕ್ಕಿಂತಲೂ ಹೆಚ್ಚು ಶಾಸಕರು ಪಾರ್ಟಿ ತೊರೆಯಲು ಸಿದ್ಧರಿದ್ದಾರೆ. ಅಲ್ಲಿ ಅವರಿಗೆ ಉಸಿರುಗಟ್ಟಿಸುವ ಪರಿಸ್ಥಿತಿಯಿದೆ ಎಂದು ಗೋಯಲ್ ಹೇಳಿದರು.

ಇದಕ್ಕಿಂತ ಮೊದಲು ಕೂಡ ಆಮ್ ಆದ್ಮಿ ಪಾರ್ಟಿಯ ಹಲವು ಶಾಸಕರು ಬಂಡಾಯವೆದ್ದಿದ್ದಾರೆ. ಇದಕ್ಕೆ ಇತ್ತೀಚೆಗಿನ ಉದಾಹರಣೆ ಅಲಕಾ ಲಾಂಬಾ ಆಗಿದ್ದಾರೆ. ಅವರು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಾರ್ಟಿ ವಕ್ತಾರ ಸೌರಬ್ ಭಾರಧ್ವಾಜ್‍ರಿಂದ ಬೇಸತ್ತು ಕಾಂಗ್ರೆಸ್ ಸೇರ್ಪಡೆಯಾಗಲು ಬಯಸಿದ್ದಾರೆ. ಆಮ್ ಆದ್ಮಿಪಾರ್ಟಿಯ ಕೆಲವು ಶಾಸಕರು ತನ್ನನ್ನು ಸಂಪರ್ಕಿಸಿದ್ದಾರೆ. ಇವರೆಲ್ಲ ಬಿಜೆಪಿಗೆ ಸೇರ್ಪಡೆಗೊಳ್ಳಲು ಬಯಸುತ್ತಿದ್ದಾರೆ ಎಂದು ಗೋಯಲ್ ಹೇಳಿದರು. ಮನಿಶ್ ಸಿಸೊಡಿಯರ ಬಳಿ ಏಳು ಶಾಸಕರಿಗೆ ಹತ್ತು ಕೋಟಿ ರೂಪಾಯಿ ಬಿಜೆಪಿ ಕೊಡುತ್ತಿದೆ ಎಂಬುದಕ್ಕೆ ಸಾಕ್ಷ್ಯವಿದ್ದರೆ ಅದನ್ನು ಶೀಘ್ರದಲ್ಲಿ ಬಹಿರಂಗಪಡಿಸಲಿ. ನಿರಾಧಾರ ಆರೋಪ ಹೊರಿಸುವುದನ್ನು ಅವರು ತೊರೆಯಬೇಕೆಂದು ಗೋಯಲ್ ಸವಾಲು ಹಾಕಿದ್ದಾರೆ.